ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಮೂಲಕವೂ ದಾಖಲೆ ನೀಡಿ

Last Updated 11 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಹಾಸನ : ‘ಅಡುಗೆ ಅನಿಲ ಅಕ್ರಮ ತಡೆಯಲು ನಾಗರಿಕರು ಕೆಲವು ದಾಖಲೆಗಳನ್ನು ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೂಚಿಸಿದೆ. ಆದರೆ ಇದಕ್ಕೆ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ. ವೆಬ್‌ಸೈಟ್ ಮೂಲಕ ಅಥವಾ ಕೊರಿಯರ್  ಮೂಲಕ ದಾಖಲೆಗಳನ್ನು ಸಲ್ಲಿಸಿದರೂ ಸಾಕು’ ಎಂದು ಇಲಾಖೆಯ ಉಪ ನಿರ್ದೇಶಕ ಅರುಣ ಕುಮಾರ ಸಂಗಾವಿ ಸ್ಪಷ್ಟ ಪಡಿಸಿದರು. ಗುರುವಾರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಅವರು ಈ ಮಾಹಿತಿ ನೀಡಿದರು.

ಅಡುಗೆ ಅನಿಲ ಸಿಲಿಂಡರ್‌ಗಳು ಅಕ್ರಮವಾಗಿ ಬಳಕೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈಚೆಗೆ ಕೆಲವೆಡೆ ದಾಳಿ ನಡೆಸಿ 50ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿ ಕೊಂಡಿದ್ದೇವೆ. ಸುಳ್ಳು ದಾಖಲೆ, ವಿಳಾಸ ಕೊಟ್ಟು ಅಡುಗೆ ಅನಿಲ ಸಂಪರ್ಕ ಪಡೆದವರೂ ಇದ್ದಾರೆ. ಇದನ್ನು ಪತ್ತೆಮಾಡಿ, ಅರ್ಹರಿಗೆ ಮಾತ್ರ ಸಿಲಿಂಡರ್ ನೀಡುವ ಉದ್ದೇಶದಿಂದ ದಾಖಲೆಗಳ ಪರಿ ಶೀಲನೆ ನಡೆಸಲಾಗುತ್ತಿದೆ ಎಂದರು.

ಈ ಬಾರಿ ವಾಸಸ್ಥಳ ದೇಢಿ ೀಕರಣಪತ್ರವನ್ನು ಮಾತ್ರ ಕೇಳಿದ್ದೇವೆ. ರೇಶನ್ ಕಾರ್ಡ್ ಇದ್ದರೆ ಅದನ್ನು ಕೊಡಬಹುದು. ಕಾರ್ಡ್ ಇಲ್ಲದವರು ಗ್ಯಾಸ್ ಅಂಗಡಿಯವರು ನೀಡಿದ ಪುಸ್ತಕರ (ಗ್ರಾಹಕ ಸಂಖ್ಯೆಯ ದಾಖಲೆಗಾಗಿ) ಪ್ರತಿಯ ಜತೆಗೆ ಮನೆಯ ವಿದ್ಯುತ್ ಬಿಲ್‌ನ ಪ್ರತಿ ಇಟ್ಟು ಸಲ್ಲಿಸಬಹುದು.

ಬಾಡಿಗೆ ಮನೆಯಲ್ಲಿರುವವರು ಕರಾರುಪತ್ರದ ಪ್ರತಿ, ಅದಿಲ್ಲದಿದ್ದರೆ ಮನೆಯ ಮಾಲೀಕರಿಂದ ‘ಇವರು ನಮ್ಮ ಮನೆಯಲ್ಲಿದ್ದಾರೆ’ ಎಂಬ    ದೃಢಿ ೀಕರಣ ಪತ್ರದ ಜತೆಗೆ ವಿದ್ಯುತ್ ಬಿಲ್ ಪ್ರತಿ ನೀಡಿದರೂ ಸಾಕು. ಒಟ್ಟಿನಲ್ಲಿ ಒಂದೇ ವಿಳಾಸದಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕಗಳಿಲ್ಲ ಎಂಬುದನ್ನು ದೃಢೀಕರಿಸುವ ದಾಖಲೆಗಳು ಬೇಕಾಗಿವೆ ಎಂದರು.

ಅಂಗಡಿ ಮುಂದೆ ಬಿಸಿಲಿನಲ್ಲಿ ಸಾಲುಗಟ್ಟಿ ನಿಲ್ಲಲು ಕಷ್ಟವಾಗುತ್ತಿದೆ ಎಂದು ಸಾಕಷ್ಟು ಸಾರ್ವಜನಿಕರು ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಅವರು ಅಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಸಂಸ್ಥೆಯ ವೆಬ್‌ಸೈಟ್ ಚ್ಟ.ಚ್ಟ.್ಞಜ್ಚಿ.ಜ್ಞಿ ಮೂಲಕ ಸಾಖಲೆ ಸಲ್ಲಿಸಬಹುದು. ಅಥವಾ ಕೊರಿಯರ್  ಮೂಲಕ ಅಂಗಡಿಯವರಿಗೆ ನೀಡಿದರೂ ಸಾಕು ಎಂದು ಅರುಣಕುಮಾರ್ ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ 1,69,146 ಅಡುಗೆ ಅನಿಲ ಸಂಪರ್ಕಗಳಿವೆ. ಇವರಲ್ಲಿ ಈ ವರೆಗೆ ಹತ್ತು ಹನ್ನೆರಡು ಸಾವಿರ ಮಂದಿ ಮಾತ್ರ ಈ ದಾಖ ಲೆಗಳನ್ನು ಸಲ್ಲಿಸಿದ್ದಾರೆ.  ಕೂಡಲೇ ದಾಖಲೆ ಒದಗಿಸುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT