ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜುಮನ್‌ , ಪಾಟೀಲ ಕಾಲೇಜು ಚಾಂಪಿಯನ್‌

Last Updated 26 ಸೆಪ್ಟೆಂಬರ್ 2013, 7:04 IST
ಅಕ್ಷರ ಗಾತ್ರ

ಸಿಂದಗಿ: ಆತಿಥೇಯ ಅಂಜುಮನ್‌ ಪದವಿಪೂರ್ವ ಕಾಲೇಜು ಮತ್ತು ಸ್ಥಳೀಯ ಆರ್.ಡಿ.ಪಾಟೀಲ ಪಿಯು ಕಾಲೇಜು ತಂಡದವರು, ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಕಲಕೇರಿ ಎಸ್.ಬಿ ಪಿಯು ಕಾಲೇಜು ತಂಡ ಬಾಲಕರ ವಿಭಾಗದ ರನ್ನರ್‌ ಅಪ್‌ ಸ್ಥಾನ ಗಳಿಸಿಕೊಂಡರೆ ಬಾಲಕಿಯರ ವಿಭಾಗದಲ್ಲಿ ದೇವರಹಿಪ್ಪರಗಿ ಡಿ.ಎಚ್. ಪಿಯು ಕಾಲೇಜು ತಂಡ ರನ್ನರ್‌ ಅಪ್‌ ಆಯಿತು.

ಫಲಿತಾಂಶಗಳು: ಬಾಲಕರ ವಿಭಾಗ: 42 ಕೆ.ಜಿ–ಎಂ.ಎಸ್. ನಾಯೊ್ಕೋಡಿ (ಕಲಕೇರಿ ಕಾಲೇಜ್), 46 ಕೆ.ಜಿ–ಆರ್.ಎಸ್.ಗೌಂಡಿ (ಅಂಜುಮನ್ ಕಾಲೇಜ್), 50ಕೆ.ಜಿ–ಸಿ.ಎಸ್.ಹಚಾ್ಯಳ (ಸಿಂದಗಿ ಎಚ್.ಜಿ.ಕಾಲೇಜ್), 55 ಕೆ.ಜಿ–ಆರ್.ವೈ.ಪೂಜಾರಿ (ತಾಂಬಾ ಕಾಲೇಜ್), 60 ಕೆ.ಜಿ–ಎಸ್.ಕೆ.ಕೊಕಟನೂರ (ಅಂಜುಮನ್ ಕಾಲೇಜ್), 66 ಕೆ.ಜಿ–ಪಿ.ಎಸ್.ಅರಳಗುಂಡಗಿ (ಅಂಜುಮನ್ ಕಾಲೇಜ್), 74 ಕೆ.ಜಿ–ಎಸ್.ಎ. ಮುರಗೋಡ (ಸಾಲೋಟಗಿ ಕಾಲೇಜ್), 84 ಕೆ.ಜಿ–ಎ.ಎಸ್.ವಾಲಿ (ತಿಕೋಟ ಕಾಲೇಜ್).

ಬಾಲಕಿಯರ ವಿಭಾಗ: 44 ಕೆ.ಜಿ–ಆರ್.ಜೆ.­ಭಜಂತ್ರಿ (ಆರ್.ಡಿ.ಪಾಟೀಲ ಕಾಲೇಜ್), 48 ಕೆ.ಜಿ– ಬಿ.ಎಚ್.ಬಿರಾದಾರ (ಆರ್.ಡಿ.ಪಾಟೀಲ ಕಾಲೇಜ್), 51 ಕೆ.ಜಿ–ಐ.ಎಸ್.ನಾಟೀಕಾರ (ಆರ್‌.ಡಿ. ಪಾಟೀಲ ಕಾಲೇಜ್), 55 ಕೆ.ಜಿ– ಎಸ್.ಕೆ. ನಾಯೊ್ಕೋಡಿ (ದೇವರಹಿಪ್ಪರಗಿ ಕಾಲೇಜ್), 59 ಕೆ.ಜಿ–ಎಂ.ಬಿ.ರಾಠೋಡ (ದೇವರಹಿಪ್ಪರಗಿ ಕಾಲೇಜ್‌).

ಉದ್ಘಾಟನೆ:ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಬಿ.ಎಂ.ಬಿರಾದಾರ ಉದ್ಘಾಟಿಸಿದರು. ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು, ವಿಶ್ರಾಂತ ಪ್ರಾಚಾರ್ಯ ಆರ್.ಬಿ.ಬೂದಿಹಾಳ ಮುಖ್ಯ ಅತಿಥಿಗಳಾಗಿದ್ದರು.

ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎ.ದುದನಿ, ಎ.ಐ.ಮುಲ್ಲಾ, ಮಹಿಬೂಬ ಹಸರಗುಂಡಗಿ, ಪಿಯು ಕಾಲೇಜ್ ನೋಡಲ್ ಅಧಿಕಾರಿ ಪ್ರಾಚಾರ್ಯ ಶಂಕರ ಅಮಾತೆ, ಪ್ರಾಚಾರ್ಯ ಜಾಕೀರ್‌ ಅಂಗಡಿ, ಕ್ರೀಡಾಕೂಟದ ಸಂಘಟಕ ಎಸ್.ಜಿ.ಚೌಧರಿ, ಉಪಪ್ರಾಚಾರ್ಯ ಆರ್.ಎ.ಹೊಸಗೌಡರ ಉಪಸ್ಥಿತರಿದ್ದರು. ಎಂ.ಡಿ.ಬಳಗಾನೂರ ಸ್ವಾಗತಿಸಿದರು. ಪ್ರೊ.ರಾ.ಶಿ.ವಾಡೇದ ನಿರೂಪಿಸಿದರು. ಪ್ರೊ.ಬಿ.ಎಂ.ಬೂದನೂರ ವಂದಿಸಿದರು.

ನಿರ್ಣಾಯಕರಾಗಿ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಾಂತೇಶ ದುರ್ಗಿ ಕಲಕೇರಿ, ಪಿ.ಟಿ.ಬಿರಾದಾರ ಆಲಮೇಲ, ಆರ್.ಡಿ.ಪವಾರ ಗೋಲಗೇರಿ, ಎ.ಎ.ಮಂದೂ್ರಪ ಮೋರಟಗಿ, ಬಿ.ಐ. ಮಸಳಿ, ಎಂ.ಐ.ಪೂಜಾರಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT