ವಿವಿಧ ರಾಷ್ಟ್ರಗಳ ೨೨ ವಿಜ್ಞಾನಿಗಳು, ೨೦ ವಿಜ್ಞಾನ ಸಹಾಯಕರು ಸೇರಿದಂತೆ ಒಟ್ಟು ೭೪ ಜನರು ರಷ್ಯಾದ ‘ಅಕಾಡೆಮಿಕ್ ಶೋಕಾಲ್‌ಸ್ಕಿ’ ಹಡಗಿನಲ್ಲಿ ಕಳೆದ ಡಿಸೆಂಬರ್ 8ರಂದು ಅಂಟಾರ್ಕ್ಟಿಕಾ ಖಂಡಕ್ಕೆ ವಿಶೇಷ ವಿಜ್ಞಾನಯಾತ್ರೆ ಕೈಗೊಂಡಿದ್ದರು. ಆದರೆ, ತೀವ್ರ ಹಿಮ ಮಾರುತದಿಂದಾಗಿ ಮಂಜುಗಡ್ಡೆಗಳಿಂದ ಹೆಪ್ಪುಗಟ್ಟಿದ ಸಮುದ್ರದಲ್ಲಿ ಈ ಹಡಗು ಸಿಲುಕಿಕೊಂಡಿತ್ತು.