ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಾರ್ಕ್‌ಟಿಕ ತಳ ಶೀಘ್ರ ಸ್ಪರ್ಶ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಮಾಸ್ಕೊ (ಐಟಿಎಆರ್-ಟಿಎಎಸ್‌ಎಸ್): ಸುಮಾರು 3700 ಮೀಟರ್ ಆಳವಿರುವ ಅಂಟಾರ್ಕ್‌ಟಿಕದ ಮಂಜುಗಡ್ಡೆ ಕೊರೆಯುವ ಕೆಲಸ ಅಂತಿಮ ಹಂತದಲ್ಲಿದ್ದು, ಇದು ಪೂರ್ಣಗೊಂಡ ನಂತರ ವಿಕಾಸವಾದ ಕುರಿತ ಹೊಸ ರಹಸ್ಯಗಳು ಬೆಳಕಿಗೆ ಬರಬಹುದೆಂದು ನಿರೀಕ್ಷಿಸಲಾಗಿದೆ.

ಮಂಜುಗಡ್ಡೆಯ ತಳದಲ್ಲಿರುವ ಸರೋವರವನ್ನು ತಲುಪಲು ರಷ್ಯದ ಧ್ರುವ ಪ್ರದೇಶದ ಸಂಶೋಧಕರು 20 ವರ್ಷಗಳಿಂದ ಮಂಜುಗಡ್ಡೆಗೆ ತೂತು ಕೊರೆಯುವ ಕಾರ್ಯದಲ್ಲಿ ತೊಡಗಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ತಿಳಿಸಿರುವ ಸಂಶೋಧಕ ಅರ್ಥರ್ ಚಿಲ್ಲಿಂಗ್‌ರೋವ್, `ಉತ್ಕೃಷ್ಠ ವೈಜ್ಞಾನಿಕ ಹಾಗೂ ಭೌಗೋಳಿಕ ಅನ್ವೇಷಣೆ ಇದಾಗಲಿದೆ. ಮಂಜುಗಡ್ಡೆ ಅಡಿಯಲ್ಲಿನ ಸರೋವರ ದಶಲಕ್ಷ ವರ್ಷಗಳಷ್ಟು ಹಳೆಯದೆನ್ನಲಾಗಿದ್ದು, ಅದರ ನೀರಿನ ಮಾದರಿಯ ವಿಶ್ಲೇಷಣೆ ವಿಕಾಸವಾದದ ಬಗ್ಗೆ ಹೊಸ ಸಂಗತಿಗಳನ್ನು ಹೊರಗೆಡವಬಹುದು~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT