ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂಡರ್‌ಪಾಸ್' ಗೋಳು; ಮತ್ತೆ ಪ್ರತಿಭಟನೆ

Last Updated 6 ಆಗಸ್ಟ್ 2013, 5:56 IST
ಅಕ್ಷರ ಗಾತ್ರ

ನಂಜನಗೂಡು: ಪಟ್ಟಣದ ರೈಲು ನಿಲ್ದಾಣ ಸಮೀಪದ `ಅಂಡರ್‌ಪಾಸ್' ರಸ್ತೆಯ ಸೇತುವೆ ತಳಭಾಗದಲ್ಲಿ ಮಳೆ ನೀರು ನಿಲ್ಲಿಕೆಯ ತೊಂದರೆಗೆ 5 ವರ್ಷವಾದರೂ ಮುಕ್ತಿ ಕಂಡಿಲ್ಲ. ಈ ಸಮಸ್ಯೆ ಬಗೆರಿಸುವಂತೆ ಈವರೆಗೆ ಹತ್ತಾರು ಬಾರಿ ಪ್ರತಿಭಟನೆಗಳು ನಡೆದಿದ್ದು, ಸೋಮವಾರ ಮತ್ತೊಂದು ಪ್ರತಿಭಟನೆ ನಡೆಯಿತು.

ಪ್ರಗತಿಪರ ಒಕ್ಕೂಟದ ಸದಸ್ಯರು ಹಾಗೂ ಆಟೋ ಚಾಲಕರು ರೈಲು ನಿಲ್ದಾಣದ ಮುಂದೆ ಧರಣಿ ಕುಳಿತು ಪ್ರತಿಭಟನೆಗೆ ಮುಂದಾದರು. ರೈಲ್ವೆ ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದಾಗಿ ಮಳೆ ನೀರು ಹೊರ ಸಾಗಿಸುವ ಭೂಗತ ಪೈಪ್‌ಲೈನ್ ಮಾರ್ಗ ಸಮರ್ಪಕವಾಗಿ ನಿರ್ಮಾಣವಾಗಿಲ್ಲ. ಪರಿಣಾಮ ಮಳೆ ನೀರು ಈ ಪೈಪ್ ಮೂಲಕ ಹರಿದು ಹೋಗುತ್ತಿಲ್ಲ. ಸೇತುವೆ ತಳಭಾಗದಲ್ಲಿ ನೀರು ನಿಂತು ಕಾಂಕ್ರಿಟ್ ಕಿತ್ತು ರಸ್ತೆ ಗುಂಡಿಯಾಗಿದೆ. ಸಲಾಕೆಗಳು ಮೇಲೆದ್ದಿವೆ. ನೀರಿನಿಂದ ಆವೃತವಾದ ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರು ಅಪಾಯವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಿದಾಗಲೆಲ್ಲಾ ಅಧಿಕಾರಿಗಳು ಪೊಳ್ಳು ಭರವಸೆ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ತನಕ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ತಹಶೀಲ್ದಾರ್ ಅರುಳ್‌ಕುಮಾರ್ ಸ್ಥಳಕ್ಕೆ ಆಗಮಿಸಿ, ಮೈಸೂರು ರೈಲ್ವೆ ವಿಭಾಗದ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ರೈಲ್ವೆ ಸಹಾಯಕ ಎಂಜಿನಿಯರ್ ವಿಜಯಭಾಸ್ಕರ್ ಆಗಮಿಸಿ ಧರಣಿ ನಿರತರನ್ನು ಕುರಿತು ಮಾತನಾಡಿದರು. ಕಂದಾಯ ಸಚಿವರು, ಸಂಸದರು ಹಾಗೂ ರೈಲೆ ವಿಭಾಗೀಯ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿ, ಅವರಿಂದ ಸಲಹೆ, ಸೂಚನೆ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಾಧಿಕಾರಿ ಡಿ. ರಮೇಶ್, ಸಿಪಿಐ ಜಿ.ಎಸ್. ರಘು ಇದ್ದರು. ಒಕ್ಕೂಟದ ಅಧ್ಯಕ್ಷ ಟಿ. ಮುರಳೀದರ್, ಸತೀಶ್‌ಗೌಡ, ಬಸವರಾಜು, ಹಗಿನವಾಳು ಬಸವಣ್ಣ, ಆಟೋ ಚಾಲಕರ ಸಂಘದ ಅಧ್ಯಕ್ಷ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT