ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಾಣು ಬೆಳವಣಿಗೆ ಉದ್ದೀಪಿಸುವ ಚೋದಕ ಪತ್ತೆ!

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಿಗೊಂದು ಸಿಹಿಸುದ್ದಿ!
ಮಹಿಳೆಯರ ಗರ್ಭಾಶಯದಲ್ಲಿ ಅಂಡ ಕೋಶ (ಫಾಲಿಕಲ್) ಮತ್ತು ಅಂಡಾಣು ಬೆಳವಣಿಗೆ ಉದ್ದೀಪಿಸುವ ಚೋದಕ ಯಾವುದೆಂಬುದನ್ನು (ಹಾರ್ಮೋನ್) ವಿಜ್ಞಾನಿಗಳು ಕಂಡುಹಿಡಿದಿದ್ದು, ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ನೆರವಾಗಲಿದೆ.

ಈ ಚೋದಕವು ಬಂಜೆತನ ಹಾಗೂ ಸರಿಯಾಗಿ ಗರ್ಭಕಟ್ಟದ ಮಹಿಳೆಯರಿಗೆ ವರದಾನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಟ್ಯಾನ್‌ಫೋರ್ಡ್ ಮತ್ತು ಜಪಾನಿನ ಅಕಿರಾ ವಿಶ್ವವಿದ್ಯಾಲಯದ ವಿಜ್ಞಾನಿಗಳು `ಆರ್-ಸ್ಪಾನ್‌ಡಿನ್2' ಹೆಸರಿನ ಈ ಚೋದಕವನ್ನು ಪತ್ತೆ ಹಚ್ಚಿದ್ದಾರೆ. ಗರ್ಭಕೋಶದಲ್ಲಿ ಇನ್ನೂ ಫಲಿತವಾಗದಿರುವ ಅಂಡಾಣುವನ್ನು `ಆರ್-ಸ್ಪಾನ್‌ಡಿನ್2' ಚೋದಕವು ಫಲಿತವಾಗುವಂತೆ ಉದ್ದೀಪಿಸುತ್ತದೆ ಎಂದು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ವಿವಿಯ ಸಂತಾನೋತ್ಪತ್ತಿ, ಪ್ರಸೂತಿ ಮತ್ತು ಕಾಂಡಕೋಶ ವಿಜ್ಞಾನ ವಿಭಾಗದ ಸಂಶೋಧಕ ಆರಾನ್ ಜೆ.ಡಬ್ಲ್ಯು ಹುಷೆ ಹೇಳಿದ್ದಾರೆ.

ಇಲಿಗಳ ಮೇಲೆ ಪ್ರಯೋಗ ಯಶಸ್ವಿ: ಪ್ರೋಟೀನ್‌ನಿಂದ ಕೂಡಿದ ಅಂಡಾಣುಗಳನ್ನು ಪ್ರನಾಳದಲ್ಲಿಟ್ಟು `ಆರ್-ಸ್ಪಾನ್‌ಡಿನ್2' ಚೋದಕ ಸೇರಿಸಿ ಹೆಣ್ಣು ಇಲಿಗಳ ಗರ್ಭಕೋಶದಲ್ಲಿ ಇರಿಸಲಾಯಿತು. ಚೋದಕದ ಪ್ರಭಾವದಿಂದಾಗಿ ಇಲಿಗಳ ಅಂಡಾಶಯದಲ್ಲಿ ಸಂತಾನೋತ್ಪತ್ತಿಗೆ ಪೂರಕವಾಗುವ ಫಲಿತ ಅಂಡಾಣುಗಳು ಬಿಡುಗಡೆಯಾದವು. ಈ ರೀತಿ  ಫಲಿತಗೊಂಡ ಅಂಡಾಣುಗಳು ಇಲಿಗಳು ಗರ್ಭ ಧರಿಸುವಲ್ಲಿ ಮುಖ್ಯ ಪಾತ್ರ ವಹಿಸಿದವು ಎಂದು ತಜ್ಞರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT