ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಕಾಲೇಜು ಅಥ್ಲೆಟಿಕ್‌– 2 ದಾಖಲೆ

Last Updated 11 ಡಿಸೆಂಬರ್ 2013, 9:10 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಮಂಗಳ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ‘ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ 33ನೇ ಅಥ್ಲೆಟಿಕ್‌ ಕ್ರೀಡಾಕೂಟ’ದಲ್ಲಿ ಎರಡು ದಾಖಲೆಗಳು ನಿರ್ಮಾಣವಾಗಿದ್ದು, ಇಬ್ಬರು ಕ್ರೀಡಾಪಟುಗಳು ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಪುರುಷರ ವಿಭಾಗದ 800 ಮೀಟರ್‌ ಓಟದಲ್ಲಿ 2002–3ನೇ ಸಾಲಿನಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಅಶೋಕ್‌ ಕೆ.ಎಸ್‌. ಮಾಡಿದ್ದ ದಾಖಲೆಯನ್ನು ಅದೇ ಕಾಲೇಜಿನ ಸೂರಜ್‌ ಅವರು ಮುರಿದಿದ್ದಾರೆ. ಅಶೋಕ್‌ ಅವರು 1.55.2 ಸೆಕೆಂಡ್‌್‌ಗಳಲ್ಲಿ ಕ್ರಮಿಸಿ ನಿರ್ಮಿಸಿದ್ದ ದಾಖಲೆಯನ್ನು 1.53.0 ಸೆಕೆಂಡ್‌­ಗಳಲ್ಲಿ ಗುರಿ ತಲುಪುವ ಮೂಲಕ ಸೂರಜ್‌ ತಮ್ಮ ಹೆಸರಿಗೆ ಮಾಡಿದ್ದಾರೆ.
ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಚರಣ್‌ ಕೆ.ಬಿ. ಅವರು 400 ಮೀ. ಹರ್ಡಲ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಆಳ್ವಾಸ್‌ ಕಾಲೇಜಿನ ಡಾಲ್ವಿನ್‌ ಡಯಾಸ್‌ 2007–8ನೇ ಸಾಲಿನಲ್ಲಿ 54.8 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಗುರಿಯನ್ನು ಚರಣ್‌ ಅವರು 54.1 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ.

ಆಳ್ವಾಸ್‌ ಕಾಲೇಜಿನ ಜಮಾಲುದ್ದೀನ್‌ ಅವರು 100 ಮೀಟರ್‌ ಓಟದಲ್ಲಿ ಮಾಡಿದ್ದ ದಾಖಲೆ (10.6)ಯನ್ನು ಅದೇ ಕಾಲೇಜಿನ ಸೋನಿತ್‌ ಮೆಂಡನ್‌ ಸರಿಗಟ್ಟಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಎಸ್‌ಡಿಎಂ ಬಿಬಿಎಂ ಕಾಲೇಜಿನ ಪೂವಮ್ಮ ಅವರ ಹೆಸರಿನಲ್ಲಿ ಇದ್ದ 100 ಮೀಟರ್‌ ಓಟದ ದಾಖಲೆ (12.3)ಯನ್ನು  ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಭುವಿ ಜಿ.ಶಂಕರ್‌ ಅವರು 12.3 ಸೆಕೆಂಟ್‌ಗಳಲ್ಲಿ ಕ್ರಮಿಸಿ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ನಡೆದ ಕ್ರೀಡಾಕೂಟದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ತಂಡ ಮುನ್ನಡೆ ಸಾಧಿಸಿದೆ. ಹಳೆಯಂಗಡಿಯ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಕೂಟ ಹಮ್ಮಿಕೊಂಡಿದ್ದು, ವಿಶ್ವವಿದ್ಯಾಲಯದ ಅಧೀನದ 61 ಕಾಲೇಜುಗಳು ಭಾಗವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT