ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂತರಂಗದಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸಲಿ'

Last Updated 17 ಡಿಸೆಂಬರ್ 2012, 6:02 IST
ಅಕ್ಷರ ಗಾತ್ರ

ಅರಸೀಕೆರೆ: ನಮ್ಮ ಪೂರ್ವಿಕರಿಂದ ಬೆಳೆದು ಬಂದಿರುವ ಸಂಪ್ರದಾಯ ಪರಂಪರೆಯನ್ನು ಮುಂದುವರಿಸಿ ಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಶನಿವಾರ ತಿಳಿಸಿದರು.

ತಾಲ್ಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಆವರಣದಲ್ಲಿ ಆಯೋಜಿ ಸಿದ್ದ ಕಾರ್ತಿಕ ಲಕ್ಷ ದೀಪೋತ್ಸವ ಹಾಗೂ ಅರಿವಿನ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತ ನಾಡಿದರು.

ಕತ್ತಲೆಯಿಂದ ಬೆಳಕಿನಡೆಗೆ, ಅಜ್ಞಾನ ದಿಂದ ಸುಜ್ಞಾದೆಡೆಗೆ ಕರೆದೊ ಯ್ಯುವುದೇ ಕಾರ್ತಿಕ ದೀಪೋತ್ಸವದ ಉದ್ದೇಶ. ಬೆಳಕು ಅರಿವಿನ ಸಂಕೇತ. ಬೆಳಕಿದ್ದರೆ ಯಾವುದರ ಭಯವಿಲ್ಲ, ಅಂತರಂಗದಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸಬೇಕು. ಧರ್ಮದ ಬಗೆಗೆ ಮಾತನಾಡುವುದು ಸುಲಭ. ಆದರೆ ಆ ಧರ್ಮವನ್ನು ಪರಿಪಾಲಿಸುವುದು ತುಂಬಾ ಕಷ್ಟ ಎಂದರು. 

ಜಮಖಂಡಿ ಓಲೆಮಠದ ಡಾ.ಅಭಿನವ ಕುಮಾರ ಸ್ವಾಮೀಜಿ ಮಾತನಾಡಿ, ಮನುಷ್ಯ ಪ್ರತಿ ನಿತ್ಯ ಜೀವನ ಜಂಜಾಟದಲ್ಲಿ ಸಿಲುಕಿ ಧರ್ಮದ ನಿಜವಾದ ಪರಿಪಾಲನೆಯನ್ನು ಮರೆ ಯುತ್ತಿದ್ದಾನೆ. ಬದುಕಿನ ಒತ್ತಡದಲ್ಲಿ ಸಿಲುಕಿರುವ ಮನುಷ್ಯನಿಗೆ ಶಾಂತಿ ನೆಮ್ಮದಿ ಲಭಿಸಲು ಧರ್ಮಾಚರಣೆ ಅವಶ್ಯವಾಗಿದೆ ಎಂದರು.

ಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ, ಡಿ.ಎಂಕುರ್ಕೆ ಬೂದಿಹಾಲ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ, ಕೆ.ಬಿದರೆ ದೊಡ್ಡ ಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಜೋಹಾನ್ಸ್‌ಬರ್ಗ್ ಮೋನೋ ರೈಲು ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಸ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗೀಜೀಹಳ್ಳಿ ಗುರುಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಗೀಜೀಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮ ಶೇಖರ್, ಎಚ್.ಪಿ.ಬಸವಲಿಂಗಪ್ಪ, ಎಚ್.ಸಿ.ಮಹದೇವ್, ಹಾರನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಓಂಕಾರಮೂರ್ತಿ, ಅಣ್ಣಾಯಕನಹಳ್ಳಿ ಮಲ್ಲಿಕಾರ್ಜುನ್, ಆರ್.ಬಿ. ಶಿವಪ್ಪ, ಎಚ್.ಕೆ. ಮಾದಪ್ಪ ಉಪಸ್ಥಿತರಿದ್ದರು.   

ಕಣ್ಮನ ಸೆಳೆದ ಲಕ್ಷ ದೀಪೋತ್ಸವ:
ಭಕ್ತಾದಿಗಳು, ಮಹಿಳೆಯರು, ನೂರಾರು ವಿದ್ಯಾರ್ಥಿಗಳು ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಶಿವಲಿಂಗೇಶ್ವರ ಸನ್ನಿಧಿಯನ್ನು ದೀಪಾಲಂಕಾರಗಳಿಂದ ವಿಜೃಂಭಿಸುವಂತೆ ಮಾಡಿದರು.

ದೇವಾಲಯದ ಅಂಗಳದಲ್ಲಿ ಅನೇಕ ಮಹಿಳೆಯರು ರಂಗೋಲಿ ಹಾಕಿ ಅವುಗಳನ್ನು ಬಣ್ಣ ಬಣ್ಣಗಳನ್ನು ತುಂಬಿ ಅದರೊಳಗೆ ಮಣ್ಣಿನ ಹಣತೆಗಳನ್ನಿಟ್ಟು ಅಲಂಕರಿಸಿದ್ದು ಜನರ ಮನಸೆಳೆಯಿತು. ದೂರ ದೂರದ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ದೀಪೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT