ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದಲ್ಲಿ ಇಸ್ರೊ ವಿಜ್ಞಾನಿಗಳು

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪ್ರಸ್ತುತ ಉಭಯ ದೇಶ­ಗಳ ನಡುವಿನ ದ್ವಿಪ­ಕ್ಷೀಯ ಬಾಂಧವ್ಯ­ದಲ್ಲಿ ಭಿನ್ನಮತ ಮೂಡಿ­ದ್ದರೂ, ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೊ’ ವಿಜ್ಞಾನಿಗಳು ಅಮೆ­ರಿಕ ಆಯೋಜಿಸಿರುವ ಪ್ರಪ್ರಥಮ ಅಂತರ­ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ ಮೇಲಿನ ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸಿದೆ.

‘ಸ್ಯಾಕ್‌’ (ಬಾಹ್ಯಾಕಾಶ ಅನ್ವಯಿಕ ಕೇಂದ್ರ)ದ ಸಹ ನಿರ್ದೇಶಕ ಎ.ಎಸ್‌. ಕಿರಣ್‌ ಕುಮಾರ್‌ ನೇತೃತ್ವ ನಿಯೋಗವು ಗುರುವಾರದಿಂದ ಆರಂಭವಾಗಿರುವ ಎರಡು ದಿನಗಳ ಬಾಹ್ಯಾ­ಕಾಶ ಸಂಶೋ­ಧನಾ ಸಮ್ಮೇಳನ ಮತ್ತು ಬಾಹ್ಯಾ­ಕಾಶ ಸಂಸ್ಥೆಗಳ ಮುಖ್ಯಸ್ಥರ ಶೃಂಗಸಭೆಯಲ್ಲಿ ಪಾಲ್ಗೊಂಡಿದೆ.

ಭಾರತೀಯ ನಿಯೋಗವು ಸಚಿವರ ಮಟ್ಟ­­­ದಲ್ಲಾಗಲೀ ಅಥವಾ ಇಸ್ರೊ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್‌ ನೇತೃತ್ವ­ದಲ್ಲಾಗಲೀ ಪಾಲ್ಗೊಂಡಿಲ್ಲ. ಇಂತಹ ಪ್ರಮುಖ ಸಮ್ಮೇ­ಳ­­ನಕ್ಕೆ ಭಾರ­ತೀಯ ನಿಯೋಗ ಪ್ರತಿನಿಧಿಸುವ ಬಗ್ಗೆ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ.

ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಜೆನ್‌ ಸಾಕಿ, ಗುರುವಾರ ಈ ಸಮ್ಮೇಳನದ ಕುರಿತು ಮಾಧ್ಯಮ­ಗಳಿಗೆ ವಿವರಣೆ ನೀಡಿ, ಶುಕ್ರವಾರ ಭಾರತೀಯ ನಿಯೋಗವನ್ನು ಇಲಾಖೆ ಸ್ವಾಗತಿಸು­ತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT