ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷ ಎಷ್ಟು ಪರಿಚಿತ?

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

1. ನಕ್ಷತ್ರ ಲೋಕದ ಬಹು ಭೀಕರ ಪ್ರಳಯ ಸದೃಶ ವಿದ್ಯಮಾನವೊಂದರ ದೃಶ್ಯ ಇಲ್ಲಿದೆ (ಚಿತ್ರ-1). ಈ ವಿದ್ಯಮಾನ ಯಾವುದು ಗೊತ್ತೇ?
ಅ. ನಕ್ಷತ್ರಗಳ ಡಿಕ್ಕಿ
ಬ. ಸೂಪರ್ ನೋವಾ ಸಿಡಿತ
ಕ. ಗ್ಯಾಲಕ್ಸಿಗಳ ಸಂಘರ್ಷ
ಡ. ಮಹಾಸ್ಫೋಟ (ಬಿಗ್ ಬ್ಯಾಂಗ್)

2. ಇಡೀ ವಿಶ್ವದಲ್ಲಿ ನಮ್ಮದೇ ಗ್ಯಾಲಕ್ಸಿಯಾದ `ಕ್ಷೀರಪಥ~ವನ್ನು ಬಿಟ್ಟರೆ ಬರಿಗಣ್ಣಿಗೇ ಗೋಚರಿಸುವ ಒಂದೇ ಒಂದು ಗ್ಯಾಲಕ್ಸಿ ಇದೆ (ಚಿತ್ರ-2). ಈ ಗ್ಯಾಲಕ್ಸಿಯ ಹೆಸರೇನು?
ಅ. ಬೃಹತ್ ಮ್ಯಾಜಲಾನಿಕ್ ಮೋಡ
ಬ. ಚಿಕ್ಕ ಮ್ಯಾಜಲಾನಿಕ್ ಮೋಡ
ಕ. ಎಂ-32
ಡ. ಆ್ಯಂಡ್ರೋಮೇಡಾ ಗ್ಯಾಲಕ್ಸಿ

3. ಪ್ರಸಿದ್ಧ `ನಕ್ಷತ್ರ ಪುಂಜ~ವೊಂದು ಚಿತ್ರ-3 ರಲ್ಲಿದೆ. ನಕ್ಷತ್ರಲೋಕದಲ್ಲಿ ಒಟ್ಟು ಎಷ್ಟು `ನಕ್ಷತ್ರ ಪುಂಜ~ಗಳನ್ನು ಗುರುತಿಸಲಾಗಿದೆ?
ಅ. 12
ಬ. 88
ಕ. 165
ಡ. ಅಸಂಖ್ಯ

4. ಸ್ಫೋಟಗೊಂಡ ನಕ್ಷತ್ರದ ಅವಶೇಷಗಳು ಚದರುತ್ತಿರುವ ದೃಶ್ಯ ಚಿತ್ರ-4 ರಲ್ಲಿದೆ. ಹೀಗೆ ಚದರುವ ತಾರಾವಶೇಷ ರಾಶಿಗೆ ಏನು ಹೆಸರು?
ಅ. ನೀಹಾರಿಕೆ
ಬ. ತಾರಾ ಧೂಳು
ಕ. ಇಂಟರ್ ಸ್ಟೆಲ್ಲಾರ್ ಮ್ಯಾಟರ್
ಡ. ನಕ್ಷತ್ರ ದ್ರವ್ಯ

5. ವಿಶ್ವದ ಪರಮ ಗರಿಷ್ಠ ಗುರುತ್ವಬಲದ ನಕ್ಷತ್ರ ವಿಧ ಚಿತ್ರ-5 ರಲ್ಲಿದೆ. ಸನಿಹದ, ಅಕ್ಕ-ಪಕ್ಕಗಳ ಇತರೆಲ್ಲ ಕಾಯಗಳನ್ನೂ ನುಂಗಿಹಾಕುವ ಇಂಥ ತಾರೆ ಇವುಗಳಲ್ಲಿ ಯಾವುದು?
ಅ. ಪಲ್ಸಾರ್
ಬ. ಕಪ್ಪುರಂಧ್ರ
ಕ. ಕ್ಪಾಸಾರ್
ಡ. ನ್ಯೂಟ್ರಾನ್ ತಾರೆ

6. ಸೌರವ್ಯೆಹದ ಸೂರ್ಯ ಮತ್ತು ಆಯ್ದ ನಾಲ್ಕು ಗ್ರಹಗಳು ಚಿತ್ರ-6 ರಲ್ಲಿವೆ. ಈ ಗ್ರಹಗಳ `ಸಾಮಾನ್ಯ ಹೆಸರು~ ಇವುಗಳಲ್ಲಿ ಯಾವುದು?
ಅ. ಗ್ರಹ ದೈತ್ಯರು
ಬ. ಅನಿಲ ದೈತ್ಯರು
ಕ. ಭೌಮಿಕ ಗ್ರಹಗಳು
ಡ. ಶೀತಲ ಗ್ರಹಗಳು

7. ಕ್ಷುದ್ರಗ್ರಹವೊಂದು ಧರೆಗೆ ಅಪ್ಪಳಿಸಿ ಆಗ ಭೂಮಿಯಲ್ಲಿ ಕಿಕ್ಕಿರಿದಿದ್ದ ಡೈನೋಸಾರ್‌ಗಳೆಲ್ಲ ವಿನಾಶಗೊಂಡ ಸುಪ್ರಸಿದ್ಧ ವಿದ್ಯಮಾನದ ಒಂದು ಕಲ್ಪನಾ ಚಿತ್ರ ಇದು (ಚಿತ್ರ-7) ಈ ಮಹಾಪ್ರಳಯ ಸಂಭವಿಸಿದ್ದು ಯಾವ ಕಾಲದಲ್ಲಿ?
ಅ. 10 ದಶಲಕ್ಷ ವರ್ಷ ಹಿಂದೆ
ಬ. 45 ದಶಲಕ್ಷ ವರ್ಷ ಹಿಂದೆ
ಕ.  65 ದಶಲಕ್ಷ ವರ್ಷ ಹಿಂದೆ
ಡ. 150 ದಶಲಕ್ಷ ವರ್ಷ ಹಿಂದೆ

8. ಶುಕ್ರಗ್ರಹದ ನೆಲದ ಒಂದು ದೃಶ್ಯ ಚಿತ್ರ-8 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಶುಕ್ರ ಗ್ರಹದ ವಿಶಿಷ್ಟ, ಅನನ್ಯ ಗುಣಗಳನ್ನು ಗುರುತಿಸಿ:
ಅ. ಚಂದ್ರನಿಲ್ಲದ ಗ್ರಹ
ಬ. ಅತ್ಯಂತ ಬಿಸಿಯ ಗ್ರಹ
ಕ. ಜೀವಿರಹಿತ ಗ್ರಹ
ಡ. ಅತ್ಯಂತ ಉಜ್ವಲ ಗ್ರಹ
ಇ. ಗಟ್ಟಿ ನೆಲದ ಗ್ರಹ.

9. ಯುರೇನಸ್ ಗ್ರಹವನ್ನು ಸನಿಹದಿಂದ ಸಂದರ್ಶಿಸಿದ ವ್ಯೋಮನೌಕೆ `ವಾಯೇಜರ್~ ಚಿತ್ರ-9 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ವಿಶೇಷ ವ್ಯೋಮನೌಕೆಗಳ ಪ್ರಧಾನ ಉದ್ದೇಶ ಯಾವ ಯಾವ ಗ್ರಹಗಳು ಹೇಳಬಲ್ಲಿರಾ?
ಅ. ಪಾತ್ ಫೈಂಡರ್
ಬ. ಗೆಲಿಲಿಯೋ
ಕ. ಮೆಸೆಂಜರ್
ಡ. ಕ್ಯಾಸಿನೀ
ಇ. ವೀನಸ್ ಎಕ್ಸ್‌ಪ್ರೆಸ್

10.ಗ್ರಹ `ಬುಧ~ದ ಚಿತ್ರ-10 ರಲ್ಲಿದೆ. ಬುಧಗ್ರಹವನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?
ಅ. ಸೌರವ್ಯೆಹದ ಅತ್ಯಂತ ಚಿಕ್ಕ ಗ್ರಹ
ಬ. ಭೂಮಿಯಿಂದ ಬರಿಗಣ್ಣಿಗೆ ಗೋಚರಿಸದು
ಕ. ಶಿಲೆಗಳಿಂದಾದ ಗಟ್ಟಿ ನೆಲ
ಡ. ಅತಿ ವೇಗದ ಸ್ವಭ್ರಮಣ
ಇ. ಬುಧನನ್ನು ಸಂದರ್ಶಿಸಿದ ಮೊದಲ ನೌಕೆ `ಮ್ಯಾರಿನರ್-10~.

11. ಚಂದ್ರನ ಮೇಲೆ ಪ್ರಪ್ರಥಮ ಮಾನವ ಪದಾರ್ಪಣ ಮಾಡಿದ ದೃಶ್ಯ ಚಿತ್ರ-11 ರಲ್ಲಿದೆ.
ಅ. ಈ ಸಾಧನೆ ಮಾಡಿದ ವ್ಯೋಮನೌಕೆ ಯಾವುದು?
ಬ. ಚಿತ್ರದಲ್ಲಿರುವ ವ್ಯೋಮಯಾತ್ರಿಯ ಹೆಸರೇನು?
ಕ. ಮೊದಲು ಚಂದ್ರನ ಮೇಲಿಳಿದು ಈ ಚಿತ್ರ ತೆಗೆದ ವ್ಯೋಮಯಾತ್ರಿ ಯಾರು?
ಡ. ಈ ಸಾಧನೆ ನೆರವೇರಿದ ವರ್ಷ?

12. ಮಂಗಳಗ್ರಹದ ಮೇಲಿಳಿದು ನೇರ ಅನ್ವೇಷಿಸಿದ ಲ್ಯಾಂಡರ್ ನೌಕೆಯೊಂದು ಚಿತ್ರ-12 ರಲ್ಲಿದೆ. ಇದೀಗ ಮಂಗಳನ ಹಾದಿಯಲ್ಲಿರುವ ಇಂಥದೇ ಅತ್ಯಾಧುನಿಕ ಲ್ಯಾಂಡರ್ ಯಾವುದು?
ಅ. ಅಪರ್ಚುನಿಟಿ
ಬ. ಕ್ಯೂರಿಯಾಸಿಟಿ
ಕ. ಈಗಲ್
ಡ. ಕ್ಯಾಸಿನೀ ಮಿಶನ್

ಉತ್ತರಗಳು
1. ಕ-ಗ್ಯಾಲಕ್ಸಿಗಳ ಸಂಘರ್ಷ
2. ಡ-ಆ್ಯಂಡ್ರೊಮೇಡಾ ಗ್ಯಾಲಕ್ಸಿ
3. ಬ-88
4. ಅ-ನೀಹಾರಿಕೆ
5. ಬ-ಕಪ್ಪುರಂಧ್ರ
6. ಬ-ಅನಿಲ ದೈತ್ಯರು
7. ಕ- 65 ದಶಲಕ್ಷ ವರ್ಷ ಹಿಂದೆ
8. ಬ ಮತ್ತು ಡ
9. ಅ-ಮಂಗಳ; ಬ-ಗುರು; 8-ಬುಧ; ಡ-ಶನಿ; ಇ-ಶುಕ್ರ
10. ಬ ಮತ್ತು ಡ
11. ಅ-ಅಪೋಲೋ-11; ಬ-ಎಡ್ವಿನ್ ಆಲ್ಡ್ರಿನ್; ಕ-ನೀಲ್ ಆರ್ಮ್‌ಸ್ಟ್ರಾಂಗ್; ಡ-1969
12. ಬ-ಕ್ಯೂರಿಯಾಸಿಟಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT