ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷ್- ದೇವಾಸ್ ಲೋಪ: ವರದಿಯಲ್ಲಿ ವೈಯಕ್ತಿಕವೇನೂ ಇಲ್ಲ- ರಾಧಾಕೃಷ್ಣನ್

Last Updated 6 ಫೆಬ್ರುವರಿ 2012, 10:45 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಅಂತರಿಕ್ಷ್- ದೇವಾಸ್ ಒಪ್ಪಂದದಲ್ಲಿ ಮಾಜಿ ಇಸ್ರೋ ಮುಖ್ಯಸ್ಥ ಜಿ. ಮಾಧವನ್ ನಾಯರ್ ಮತ್ತು ಇತರ ಮೂವರು ವಿಜ್ಞಾನಿಗಳಿಂದ ಗಂಭೀರವಾದ ಆಡಳಿತಾತ್ಮಕ ಮತ್ತು ವಿಧಿ ವಿಧಾನಗಳ ಲೋಪಗಳಾಗಿರುವುದನ್ನು ಉನ್ನತ ಮಟ್ಟದ ವರದಿ ಬಹಿರಂಗ ಪಡಿಸಿದ ಒಂದು ದಿನದ ಬಳಿಕ ~ಈ ವರದಿಯಲ್ಲಿ ವೈಯಕ್ತಿಕವಾದುದು ಏನೂ ಇಲ್ಲ~ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಸೋಮವಾರ ಇಲ್ಲಿ ಹೇಳಿದರು.

ವಿಷಯಕ್ಕೆ ಸಂಬಂಧಿಸಿದಂತೆ ~ನಾವು  ಹೇಳಬಯಸಿದ್ದನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದೇವೆ. ಅಲ್ಲಿ ಪೂರ್ಣ ವರದಿ ಇದೆ. ಎರಡನೇ ವರದಿಯ ನಿರ್ಣಯಗಳು ಮತ್ತು ಶಿಫಾರಸುಗಳೂ ಇವೆ. ನಾಲ್ಕು ಪುಟದ ಹೇಳಿಕೆಯೂ ಇದೆ. ನಾನು ಹೆಚ್ಚೇನನ್ನೂ ಸೇರಿಸಬಯಸುವುದಿಲ್ಲ. ಅದರಲ್ಲಿ ವೈಯಕ್ತಿಕವಾದದ್ದು ಏನೂ ಇಲ್ಲ~ ಎಂದು ಅವರು ನುಡಿದರು.

ವರದಿಯಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿದ ಮಾಧವನ್ ನಾಯರ್ ಅವರು ~ಅದು ಏಕ ಪಕ್ಷೀಯ. ಅಸಂಗತ ಮತ್ತು ಅಸ್ಪಷ್ಟತೆಗಳಿಂದ ಕೂಡಿದೆ~ ಎಂದು ಹೇಳುವ ಮೂಲಕ ತಮ್ಮ ಉತ್ತರಾಧಿಕಾರಿ ರಾಧಾಕೃಷ್ಣನ್ ನೇತೃತ್ವದ ಬಾಹ್ಯಾಕಾಶ ಸಂಸ್ಥೆಯ ಮೇಲೆ ದಾಳಿ ಮಾಡಿದ್ದರು. ಜೊತೆಗೇ ~ಅನುಕೂಲಕರ ಭಾಗಗಳನ್ನಷ್ಟೇ~ ಬಿಡುಗಡೆ ಮಾಡುವ ಮೂಲಕ ~ಹೇಡಿತನ~ ಪ್ರದರ್ಶಿಸಲಾಗಿದೆ ಎಂದು ಜರೆದಿದ್ದರು.

ಮಾಜಿ ಮುಖ್ಯ ಜಾಗೃತಾ ಕಮೀಷನರ್ ಪ್ರತ್ಯೂಷ ಸಿನ್ಹ ನೇತೃತ್ವದ ಪಂಚ ಸದಸ್ಯ ಸಮಿತಿಯು ಸಿದ್ಧ ಪಡಿಸಿದ್ದ ವರದಿಯನ್ನು ಶನಿವಾರ ರಾತ್ರಿ ಬಹಿರಂಗಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT