ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಬಂತು ಕೂಡಲಸಂಗಮಕ್ಕೆ ನೀರು

Last Updated 3 ಆಗಸ್ಟ್ 2012, 14:45 IST
ಅಕ್ಷರ ಗಾತ್ರ

ಕೂಡಲಸಂಗಮ :  ಐದು ತಿಂಗಳಿಂದ ಬರಿದಾಗಿದ್ದ ಕೃಷ್ಣೆಗೆ ಗುರುವಾರ ಬೆಳಿಗ್ಗೆ  ನೀರು ಬಂದಿದೆ. ಆಲಮಟ್ಟಿ ಜಲಾಶಯಕ್ಕೆ  ಅಧಿಕ ಪ್ರಮಾಣದಲ್ಲಿ ನೀರು ಹರಿದ ಬಂದ ಕಾರಣ ನೀರು ಹರಿಯ ಬಿಡಲಾಗಿದೆ. ಗುರುವಾರ ಕೂಡಲಸಂಗಮಕ್ಕೆ ಬಂದ ಭಕ್ತರು ಕೃಷ್ಣೆಯಲ್ಲಿ ಸ್ನಾನ ಮಾಡಿ ಸಂಭ್ರಮಿಸಿದರು.

ಕೃಷ್ಣೆಗೆ ನೀರು ಬರುತ್ತಿರುವುದನ್ನು ನೋಡಿ ತಂಡ ತಂಡವಾಗಿ ಕೂಡಲಸಂಗಮಕ್ಕೆ ಭೇಟಿಕೊಟ್ಟು ಕೃಷ್ಣ ಮಲ್ಲಪ್ರಭೆಯಲ್ಲಿ ಸಂಭ್ರಮದಿಂದ ಸ್ನಾನ ಮಾಡಿ ಸಂಗಮನಾಥ, ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪ ದರ್ಶನ ಪಡೆದರು.

ನದಿಯ ದಡದ ತುರಡಗಿ, ಕಟಗೂರ, ವಳಕಲದಿನ್ನಿ, ಬಿಸಲದಿನ್ನಿ, ಕೂಡಲಸಂಗಮ, ಕೆಂಗಲ್, ಕಜಗಲ್ಲ  ಗ್ರಾಮಸ್ಥರು ಸಂಗಮೇಶ್ವರ ದೇವಾಲಯದ ಬಳಿಯ ಕೃಷ್ಣೆಗೆ ಹಾಗೂ  ಸಂಗಮನಾಥನಿಗೆ ಪೂಜೆ ಸಲ್ಲಿಸಿದರು.

ನದಿಗೆ ನೀರು ಬರುತ್ತಿದಂತೆಯೇ ಅಡವಿಹಾಳ- ಕೂಡಲಸಂಗಮ ಮಧ್ಯೆ ದೋಣಿ ಸಂಚಾರ ಆರಂಭಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT