ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ರೆಸ್ಟೊರೆಂಟ್ ಇಂದು ಪ್ರೆಸ್‌ಕ್ಲಬ್

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಕಬ್ಬನ್‌ಪಾರ್ಕ್‌ನಲ್ಲಿರುವ ಈಗಿನ ಕೆಜಿಐಡಿ ಕಟ್ಟಡವು ನಿರ್ಮಾಣವಾಗಿದ್ದು 1920ರ ಆಸುಪಾಸಿನಲ್ಲಿ. ಮುಂದೆ ಇದರಲ್ಲಿ ಎಂಜಿಐಡಿ (ಮೈಸೂರು ಗವರ್ನ್‌ಮೆಂಟ್ ಇನ್ಸೂರೆನ್ಸ್ ಡಿಪಾರ್ಟ್‌ಮೆಂಟ್) ಕಾರ್ಯಾರಂಭ ಮಾಡಿತು.

ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರಿಗಾಗಿಯೇ ಉಪಾಹಾರ ಗೃಹವೊಂದನ್ನು ಪಕ್ಕದಲ್ಲಿಯೇ ಆನಂತರದಲ್ಲಿ ನಿರ್ಮಿಸಲಾಯಿತು. ಇಲ್ಲಿ ಪ್ರಾರಂಭವಾದ ಉಪಾಹಾರ ಗೃಹವು ಕ್ರಮೇಣ ಎಂಜಿಐಡಿ ರೆಸ್ಟೋರೆಂಟ್ ಎಂದೇ ಪ್ರಸಿದ್ಧವಾಗಿತ್ತು. ಈ ರೆಸ್ಟೋರೆಂಟ್‌ನ ಜಾಹೀರಾತೊಂದು 1950ರ ಮೈಸೂರು ದಸರಾ ವಸ್ತು ಪ್ರದರ್ಶನದ ಕೈಪಿಡಿಯಲ್ಲಿ ಪ್ರಕಟವಾಗಿದ್ದು, ಅದರ ಜನಪ್ರಿಯತೆಯನ್ನು ಮನವರಿಕೆ ಮಾಡಿಕೊಡುತ್ತದೆ. ಕೆಲ ಕಾಲಾನಂತರ ಈ ರೆಸ್ಟೊರೆಂಟ್ ಮುಖ್ಯ ಕಟ್ಟಡದ ಹಿಂಬದಿಯ ತಗಡಿನ ಶೆಡ್‌ಗೆ ಸ್ಥಳಾಂತರವಾಯಿತು. ಮೂಲ ಕಟ್ಟಡವೇ ಇಂದು ಪ್ರೆಸ್‌ಕ್ಲಬ್ ಎಂದು ಕಾರ್ಯ ನಿರ್ವಹಿಸುತ್ತಿದೆ.

ಪರ್ತಕರ್ತರಿಗೆಂದೇ ಪ್ರತ್ಯೇಕವಾಗಿ ಒಂದು ಪ್ರೆಸ್‌ಕ್ಲಬ್ ಬೇಕೆಂದು ಮನಗಂಡವರು ಪ್ರಜಾವಾಣಿ ಬಳಗದ ಮಾಲೀಕರಾಗಿದ್ದ ಕೆ.ಎ. ನೆಟ್ಟಕಲ್ಲಪ್ಪನವರು. ಅವರ ವಿಶೇಷ ಆಸ್ಥೆಯಿಂದಾಗಿ 1969 ರಲ್ಲಿ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಜನ್ಮತಾಳಿತು. ಆಗ ಪ್ರಜಾವಾಣಿಯ ಸಂಪಾದಕರಾಗಿದ್ದ ಟಿ.ಎಸ್. ರಾಮಚಂದ್ರರಾವ್ ಮತ್ತು ಪಿಟಿಐನ ಪ್ರಧಾನ ವರದಿಗಾರರಾಗಿದ್ದ ಎನ್. ಬಾಲು ಅವರ ಪ್ರಯತ್ನದ ಫಲವಾಗಿ ಎಂಜಿಐಡಿ ರೆಸ್ಟೋರೆಂಟ್ ನಡೆಯುತ್ತಿದ್ದ ಕಟ್ಟಡವನ್ನು ರಾಜ್ಯ ಸರ್ಕಾರದಿಂದ ಗುತ್ತಿಗೆಯ ಆಧಾರದ ಮೇಲೆ ಪ್ರೆಸ್‌ಕ್ಲಬ್‌ಗೆ ಪಡೆಯಲಾಯಿತು. ಇವರಿಬ್ಬರೂ ಕ್ರಮವಾಗಿ ಸಂಸ್ಥಾಪಕ ಅಧ್ಯಕ್ಷ, ಕಾರ್ಯದರ್ಶಿಯಾಗಿ ನೇಮಕಗೊಂಡರು. ಹಂತ ಹಂತವಾಗಿ ವಾಚನಾಲಯ, ಮನರಂಜನೆಗಾಗಿ ಆಟಗಳು, ಕ್ಯಾಂಟೀನ್ ಮತ್ತಿತರ ಸೌಲಭ್ಯಗಳನ್ನು ಪ್ರಾರಂಭಿಸಿರುವುದೇ ಈ ಕ್ಲಬ್‌ನ ವಿಶೇಷ. ಹಸಿರು ವಾತಾವರಣದ ಮಧ್ಯೆ ಇರುವ ಪ್ರೆಸ್‌ಕ್ಲಬ್ ರಾಷ್ಟ್ರದಲ್ಲೇ ಹೆಸರು ಗಳಿಸಿರುವ ವಿಶಿಷ್ಟ ಸಂಸ್ಥೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT