ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಶಾಲೆ: ದಿನಬಳಕೆ ವಸ್ತು ವಿತರಣೆ

Last Updated 22 ಡಿಸೆಂಬರ್ 2012, 8:39 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆಯಲ್ಲಿ ಸಂವಿಧಾನದ 371 ಕಲಂ ತಿದ್ದುಪಡಿಗೆ ವಿಧೇಯಕ ಮಂಡನೆ ಆದ ಹಿನ್ನೆಲೆಯಲ್ಲಿ ಇಲ್ಲಿನ ಮಾಣಿಕ ಪ್ರಭು ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ನವ ನಿರ್ಮಾಣ ವೇದಿಕೆಯು ಉಚಿತ ದಂತ ವೈದ್ಯಕೀಯ ಶಿಬಿರ ಮತ್ತು ದಿನ ಬಳಕೆ ವಸ್ತುಗಳ ವಿತರಣೆ ಸಮಾರಂಭ ಏರ್ಪಡಿಸಿತ್ತು.

371 ಕಲಂ ತಿದ್ದುಪಡಿ ವಿಧೇಯಕ ಮಂಡನೆ ಖುಷಿಯನ್ನು ಈ ರೀತಿ ಅಂಧ ಮಕ್ಕಳ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದು ಶ್ರೀ ಶಾಂತಮಲ್ಲ ಸ್ವಾಮೀಜಿಗಳು ನುಡಿದರು.

ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಂಧ ಮಕ್ಕಳ ದಂತ ತಪಾಸಣೆ ಮಾಡಿದರು. ಡಾ.ರಾಘವೇಂದ್ರ ಹವಳೆ, ಡಾ.ಶರತ್ ಅವರು ತಪಾಸಣೆ ಶಿಬಿರದ ನೇತೃತ್ವವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಯಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಮಾಣಿಕ ಪ್ರಭು ಬಡಾವಣೆ ಅಧ್ಯಕ್ಷ ಬಂಡುರಾವ ಚಾಗಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜ ಬೋರೆಡ್ಡಿ, ಅಂಧ ಮಕ್ಕಳ ವಸತಿ ಶಾಲೆಯ ಮುಖ್ಯಾಧ್ಯಾಪಕ ಕುಪೇಂದ್ರ, ಕಲ್ಯಾಣ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ ಪೊಲೀಸ್ ಪಾಟೀಲ, ಜಿಲ್ಲಾಧ್ಯಕ್ಷ ನಾಗೇಂದ್ರ ಪಾಟೀಲ, ಜಿಲ್ಲಾ ಕಾರ್ಯದರ್ಶಿ ರಮೇಶ ಪಾಟೀಲ, ಚನ್ನಬಸಪ್ಪ ಹಾಲ್ವಿ, ಆಂಜನೇಯ, ವೈಜನಾಥ ವಕೀಲ, ಶಿವಕುಮಾರ, ಬಸವಲಿಂಗಪ್ಪ ಹಾಗೂ ಇತರರಿದ್ದರು.ಗಂಗಾಧರ ಪಳಾರಿಮಠ ನಿರೂಪಿಸಿದರು. ಬಸವಲಿಂಗಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT