ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಆದರ್ಶ ಪಾಲಿಸಲು ಸಲಹೆ

Last Updated 12 ಜನವರಿ 2012, 6:00 IST
ಅಕ್ಷರ ಗಾತ್ರ

ಗದಗ: ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದು ಪ್ರೊ. ಎಸ್.ವೈ. ಹೊನ್ನುಂಗರ ಸಲಹೆ ನೀಡಿದರು.

ಸ್ಥಳೀಯ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇತ್ತೀಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೈ ಭೀಮ ವಿವಿಧೋದ್ದೇಶಗಳ ಯುವಕ ಸಂಘಗಳ ವತಿಯಿಂದ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ 2012ರ ದಿನದರ್ಶಿಕೆ ಬಿಡುಗೆಗೊಳಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಹಿಂದುಳಿದ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿ ಪ್ರಜ್ಞಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.

ಜೈ ಭೀಮ ವಿವಿಧೋದ್ದೇಶಗಳ ಯುವಕ ಸಂಘದ ಅಧ್ಯಕ್ಷ ಸತೀಶ ಹೂಲಿ ಕಾರ್ಯಕ್ರಮ ಉದ್ಘಾಟಿಸಿ, ದಲಿತ ಜನಾಂಗ ಮುಂದೆ ಬರಬೇಕು. ಅಕ್ಷರವಂತರಾಗಬೇಕು. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಅಂಬೇಡ್ಕರ್ ಅವರ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ರಾಮಣ್ಣ ರಾಂಪೂರ, ವಸತಿ ನಿಲಯದ ಮೇಲ್ವಿಚಾರಕಿ ವಿಜಯಲಕ್ಷ್ಮೀ ಇಂಗಳಳ್ಳಿ, ಮಹಾದೇವ ಚಲವಾದಿ, ಫಕೀರಮ್ಮ ಮೂಲಿಮನಿ, ಶಿವುಕುಮಾರ ಕೊಟ್ನಿಕಲ್, ಶಿಕ್ಷಕ ಬಿ.ಬಿ. ನರಗುಂದ, ಅಶೋಕ ಮ್ಯಾಗೇರಿ, ಪ್ರಕಾಶ ಕಾಳೆ, ಅಶೋಕ ಬಿಜಾರ, ರಮೇಶ ಕಡಿಯವರ, ನಾಗರಾಜ ಯಲಬುರ್ಗಿ, ನೀಲಪ್ಪ ಕೆಲೂರ, ಎಸ್.ವಿ. ಗಣಾಚಾರಿ, ಬಸವರಾಜ ಮುಧೋಳ, ಮಂಜು ಘಂಟಿ, ಶರಣಪ್ಪ ಮೊಕಾಶಿ, ಹನುಮಂತ ಹುಣಸಿಗಿಡದ, ಮುತ್ತು ಡೋಣಿ, ಮಂಜುನಾಥ ಚಲವಾದಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT