ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂಬೇಡ್ಕರ್ ಚಿಂತನೆ ಅನುಷ್ಠಾನಗೊಳ್ಳಲಿ'

Last Updated 7 ಡಿಸೆಂಬರ್ 2012, 8:16 IST
ಅಕ್ಷರ ಗಾತ್ರ

ಮುದ್ರೆಮನೆ(ಮೂಡಿಗೆರೆ): ಸಮಾಜದಲ್ಲಿ ದಲಿತರ ಜೀವನಮಟ್ಟ ಸುಧಾರಣೆಗೆ ಅಂಬೇಡ್ಕರ್ ಅವರ ಚಿಂತನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟರು.

ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ಅಂಬೇಡ್ಕರ್  ಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ  ಅವರು ಮಾತನಾಡಿದರು.

ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಅವಶ್ಯಕವಾಗಿದ್ದು, ಸಮಾಜದಲ್ಲಿ ದಲಿತರು ಇನ್ನೂ ಅಭಿವೃದ್ಧಿ ಸಾಧಿಸಲಾಗದ ಜನಾಂಗವಾಗಿಯೇ ಮುಂದುವರೆದಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ದೇಶದಲ್ಲಿ ಸಮರ್ಪಕವಾಗಿ ಅಳವಡಿಸಲು ಸರ್ಕಾರಗಳು ವಿಫಲವಾಗಿರುವುದೇ ಕಾರಣವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಅಶೋಕ್ ಮಾತನಾಡಿ, ತಾಲ್ಲೂಕಿನಲ್ಲಿರುವ ದಲಿತ ಜನಾಂಗಕ್ಕೆ ನೆರವಾಗುವಂತೆ ದಲಿತ ಕ್ಷೇಮನಿಧಿ 2005ರಲ್ಲಿಯೇ ಸ್ಥಾಪನೆ ಮಾಡಲಾಗಿದೆ. ಈ ಕ್ಷೇಮ ನಿಧಿಗೆ ಜನಾಂಗದ ಎಲ್ಲಾ ಕುಟುಂಬಗಳು ಸದಸ್ಯರಾಗುವುದರ ಮೂಲಕ ಕುಟುಂಬದ ಸದಸ್ಯರಿಗೆ ಯಾವುದಾರೂ ತುತೂ ಸಂದರ್ಭಗಳು ಬಂದಾಗ ಈ ನಿಧಿಯ ಲಾಭ ಪಡೆದುಕೊಳ್ಳಬಹುದು. ಇದರಿಂದ ಜನಾಂಗದ ಆರ್ಥಿಕ ಸುಧಾರಣೆಗೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ನಿಧನದ ಪ್ರಯುಕ್ತ ಶೋಕಾಚ ರಣೆಯಿರುವುದರಿಂದ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಸಬ್ಲಿ ದೇವರಾಜು, ಯು.ಬಿ. ಮಂಜಯ್ಯ, ಓಂಪ್ರಕಾಶ್, ಮರಿಯಪ್ಪ, ಮಹೇಂದ್ರಮೋರೆ, ಬಿ.ಎಸ್. ರಾಮಯ್ಯ, ಲೋಕವಳ್ಳಿ ರಮೇಶ್, ಬಿ.ಎಸ್. ರಾಮಯ್ಯ, ಬೆಟ್ಟಗೆರೆ ಶಂಕರ್, ಹೊಸ್ಕೆರೆ ರಮೇಶ್, ಸಾಗರ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT