ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ನಲ್ಲಿ ಕೂಡುಂಕುಳಂ ಸ್ಥಾವರ ಕಾರ್ಯಾರಂಭ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್‌ಎಸ್‌): ತಮಿಳುನಾಡಿನ ಕೂಡುಂಕುಳಂ ಪರಮಾಣು ವಿದ್ಯುತ್‌ ಸ್ಥಾವರ (ಕೆಎನ್‌ಪಿಪಿ) ಅಕ್ಟೋಬರ್‌  ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್‌) ತಿಳಿಸಿದೆ.

ಈ ಕುರಿತು ಎನ್‌ಪಿಸಿಐಎಲ್‌ ತನ್ನ ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ ತಿಂಗಳಿನಿಂದ ವಿದ್ಯುತ್‌ ಸ್ಥಾವರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಕೂಡುಂಕುಳಂ ವಿದ್ಯುತ್ ಸ್ಥಾವರದ  ಕಾಮಗಾರಿಯ ಶೇಕಡಾ 99.74ರಷ್ಟು ಕೆಲಸ ಆಗಸ್ಟ್‌ನಲ್ಲೇ ಪೂರ್ಣಗೊಂಡಿದೆ.  ಸ್ಥಾವರಕ್ಕೆ ಒಂದು ಸಾವಿರ ಮೆ.ವಾ. ರಷಿಯನ್‌ ರಿಯಾಕ್ಟರ್ ಅಳವಡಿಸಲಾಗಿದೆ. ಇದರಿಂದ ಒಂದು  ಸಾವಿರ ಮೆ. ವಾ. ಯೂನಿಟ್‌ ವಿದ್ಯುತ್‌ ಉತ್ಪಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT