ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ವರೆಗೆ ಕಾಲಾವಕಾಶ

ಸಹಕಾರ ಸಂಘಗಳ ಉಪವಿಧಿ ತಿದ್ದುಪಡಿ
Last Updated 18 ಏಪ್ರಿಲ್ 2013, 19:35 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿರುವ ಸಹಕಾರ ಸಂಘಗಳು ತಮ್ಮ ಉಪವಿಧಿಯನ್ನು (ಬೈಲಾ) ತಿದ್ದುಪಡಿ ಮಾಡಲು ಸರ್ಕಾರ ಮುಂದಿನ ಅಕ್ಟೋಬರ್ ವರೆಗೆ ಕಾಲಾವಕಾಶ ನೀಡಿದೆ' ಎಂದು ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಂಡಲೀಕ ಎನ್. ಕೇರೂರೆ ಅವರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಕಳೆದ ಅಧಿವೇಶನದಲ್ಲಿ 1959 ಸಹಕಾರಿ ಸಂಘಗಳ ಕಾಯ್ದೆಗೆ ತರಲಾದ  ತಿದ್ದುಪಡಿಯು ಫೆಬ್ರುವರಿಯಿಂದ ಜಾರಿಗೆ ಬಂದಿದೆ. ಇದರಂತೆ ಎಲ್ಲಾ ಸಹಕಾರ ಸಂಘಗಳು ತಿದ್ದಪಡಿ ಜಾರಿಗೆ ಬಂದ 90 ದಿನಗಳ ಒಳಗಾಗಿ ವಿಶೇಷ ಸಾಮಾನ್ಯ ಸಭೆ ಕರೆದು ತಿದ್ದುಪಡಿಯಾದ ಕಾಯ್ದೆಗೆ ಉಪವಿಧಿಯನ್ನು ತಿದ್ದುಪಡಿ ಮಾಡಲು ನಿರ್ದೇಶನ ನೀಡಲಾಗಿತ್ತು' ಎಂದು ಹೇಳಿದರು.

`ತಿದ್ದುಪಡಿಯಾದ ಕಾಯ್ದೆಗೆ ಅನುಗುಣವಾಗಿ ನಿಯಮಗಳು ರಚನೆಯಾಗದ ಹೊರತು ಸಹಕಾರಿ ಸಂಘಗಳು ತಮ್ಮ ಉಪ ವಿಧಿಗಳನ್ನು ರಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಮಹಾಮಂಡಲದ ವತಿಯಿಂದ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಕಾಲಾವಕಾಶ ಮತ್ತು ಲೆಕ್ಕಪರಿಶೋಧಕರ ನೇಮಕ, ಆಯವ್ಯಯ ಮಂಜೂರಾತಿ ಮಾಡಲು ಆಡಳಿತ ಮಂಡಳಿಗೆ ಆಧಿಕಾರ ನೀಡಬೇಕೆಂದು ಕೋರಿ ಸಹಕಾರ ಇಲಾಖೆಗೆ ಮಾಡಿದ್ದ ಮನವಿಯನ್ನು ಪರಿಗಣಿಸಿ ಈ ನಿರ್ದೇಶನ ನೀಡಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT