ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಅಡುಗೆ ಸಿಲಿಂಡರ್ ಮಾರಾಟ ಜಾಲ ಪತ್ತೆ

Last Updated 20 ಜೂನ್ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ಪಡೆದುಕೊಂಡು ಅದರಲ್ಲಿದ್ದ ಅನಿಲವನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ತುಂಬಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ನಗರದಲ್ಲಿ ಬುಧವಾರ ಪತ್ತೆ ಹಚ್ಚಲಾಗಿದೆ.

ಕೆಲವು ವರ್ಷಗಳಿಂದ ಸ್ಥಳೀಯ ನಾಗಲಕೆರೆ ಪ್ರದೇಶದಲ್ಲಿ ಮಹೇಶ್ ಮತ್ತು ಶೆಟ್ಟಿ ಎಂಬ ಇಬ್ಬರು, ಇಂಡಿಯನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪೆನಿಗೆ ಸೇರಿದ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ  ಪಡೆದು, ಅದರಲ್ಲಿದ್ದ ಅನಿಲವನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ತುಂಬಿ ಹೋಟೆಲ್ ಮತ್ತು ಸಮಾರಂಭಗಳಿಗೆ ಬಳಸುವ ಮಾರಾಟ ಮಾಡುತ್ತಿದ್ದರು. ಜತೆಗೆ  ವಾಹನಗಳಿಗೆ ಬಳಸಲೂ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಪತ್ತೆ ದಳ ಮತ್ತು ಕೌಲ್‌ಬಝಾರ್ ಠಾಣೆ  ಪೊಲೀಸರು ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದ 64 ಸಿಲಿಂಡರ್ ಹಾಗೂ ಅನಿಲ ವರ್ಗಾಯಿಸುವ ಪಂಪ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮಂಜುನಾಥ್ ಅಲಿಯಾಸ್ ಬುಡಾಶೆಟ್ಟಿ ಮತ್ತು ಮಹೇಶ್ ಎಂಬುವವರನ್ನು ಬಂಧಿಸಿದ್ದಾರೆ.

ಸಿಲಿಂಡರ್‌ಗಳಿಗೆ ಅನಿಲ ತುಂಬಿ, ಸೀಲ್ ಮಾಡಿ, ನಕಲಿ ಬಿಲ್ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಈ ಅಕ್ರಮ ಜಾಲದ ಹಿಂದಿರುವ ಇತರರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಕೌಲ್‌ಬಝಾರ್ ಠಾಣೆ ಇನ್ಸ್‌ಪೆಕ್ಟ್‌ರ್ ವೈ.ಡಿ. ಅಗಸಿಮನಿ ತಿಳಿಸಿದ್ದಾರೆ.

ನಗರದಲ್ಲಿರುವ ಕೆಲವು ಅಡುಗೆ ಅನಿಲ ವಿತರಣಾ ಏಜೆನ್ಸಿಯವರೂ ಇದರಲ್ಲಿ ಭಾಗಿಯಾಗಿದ್ದು, ಪ್ರತಿ ಸಿಲಿಂಡರ್‌ಗಳಿಂದ ಒಂದಷ್ಟು ಪ್ರಮಾಣದ ಅನಿಲ ಕದ್ದು, ಪುನಃ ಮೊದಲಿನಂತೆಯೇ ಸೀಲ್ ಮಾಡಿ, ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT