ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ ಕುಮ್ಮಕ್ಕು: ನೊಟೀಸ್ ಜಾರಿ?

Last Updated 7 ಅಕ್ಟೋಬರ್ 2011, 9:50 IST
ಅಕ್ಷರ ಗಾತ್ರ

ಕಾರವಾರ: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಹೆಸರಿರುವ ಜಿಲ್ಲೆಯ ವಿವಿಧ ಇಲಾಖೆಗಳ 30ಕ್ಕೂ ಹೆಚ್ಚು ಅಧಿಕಾರಿಗಳ ನೋಟಿಸ್ ತಲುಪಿದೆ ಎಂದು ತಿಳಿದು ಬಂದಿದೆ.

ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಕೈ ಸೇರಿರುವ ನೋಟಿಸ್‌ಗೆ ಸೂಕ್ತ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಸರ್ಕಾರ ಜಾರಿ ಮಾಡಿರುವ ನೋಟಿ ಸ್‌ಗೆ ಹೇಗೆ ಉತ್ತರ ಕೋಡಬೇಕು ಎನ್ನು ವ ಕುರಿತು ಸಲಹೆ ಪಡೆಯಲು ಅಧಿಕಾ ರಿಗಳು ಮತ್ತು ಸಿಬ್ಬಂದಿ ವಕೀಲರ ಸಲಹೆ ಕೇಳಲು ಕೋರ್ಟು, ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ನೋಟಿಸ್ ಪಡೆದಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಎಂದೂ ಇಲ್ಲದ ಒಗ್ಗಟ್ಟು ಬಂದಿದೆ. ಇಲ್ಲಿಯ ಅಲಿಗದ್ದಾ ದಲ್ಲಿ ಬಂದರು ಇಲಾಖೆಯ ನಿರ್ದೇಶಕ ಕಚೇರಿ ಇದ್ದು ನೋಟಿಸ್ ಪಡೆಯದೇ ಇರುವವರು ಒಂದಿಬ್ಬರು ಸಿಬ್ಬಂದಿ ಮಾತ್ರ!

ಲೋಕಾಯುಕ್ತರು 2006ರಿಂದ 2010ರ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿ ವರದಿಯನ್ನು ಸರ್ಕಾರ ಸಲ್ಲಿಸಿದ್ದು, ಈ ಅವಧಿಯಲ್ಲಿ ಸೇವೆಯಲ್ಲಿದ್ದು ಈಗ ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೂ ನೋಟಿಸ್ ಜಾರಿ ಆಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ತನಿಖಾಧಿಕಾರಿಗಳು 2010ರ ಫೆ. 20ರಂದು ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರು ಪ್ರದೇಶ ದಲ್ಲಿ ಅದಿರು ರಫ್ತು ವಹಿವಾಟು ನಡೆಸು ತ್ತಿರುವ ಮಲ್ಲಿಕಾರ್ಜುನ, ಅದಾನಿ, ಸಾಲ ಗಾಂವಕರ್, ರಾಜ್‌ಮಹಲ್ ಸಿಲ್ಕ್ಸ್  ಕಂಪೆನಿ ಕಚೇರಿಗಳ ಮೇಲೆ ದಾಳಿ ನಡೆಸಿ ಹಾರ್ಡ್‌ಡಿಸ್ಕ್ ಮತ್ತು ಇತರ ದಾಖಲೆ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಎಲ್ಲ ದಾಖಲೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಣ ನೀಡುವ ಕುರಿತು ಮಾಹಿತಿಯಿತ್ತು ಎಂದು ಗೊತ್ತಾಗಿದೆ.

ಷೋಕಾಸ್ ನೋಟಿಸ್ ಪಡೆದ ಬೆನ್ನಲ್ಲೇ ನೌಕರರಿಗೆ ಮತ್ತೊಂದು ಕಂಟಕ ಬಂದರೆಗಿದೆ. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗಳ ಬಗ್ಗೆ ಸಿಬಿಐ ತನಿಖೆ ಆರಂಭಿಸಿದ್ದು ಅಧಿಕಾರಿ ಮತ್ತು ಸಿಬ್ಬಂದಿಯ ಆತ್ಮಸ್ಥೈರ್ಯವನ್ನು ಮತ್ತಷ್ಟು ಕುಂದಿಸಿದೆ.

ಸಿಬಿಐನ ಅನಿರೀಕ್ಷಿತ ದಾಳಿಯಿಂದ ಸಂಭವಿಸುವ ತೊಂದರೆಯನ್ನು ತಪ್ಪಿಸಿ ಕೊಳ್ಳಲು ಅಕ್ರಮ ಗಣಿಗಾರಿಕೆ ರಾಜಾ ರೋಷವಾಗಿ ನಡೆಯಲು ಕಾರಣವಾ ಗಿರುವ ಇಲಾಖೆಗಳ ಅಧಿಕಾರಿಗಳು ಕಚೇರಿಯ ದಾಖಲೆಗಳನ್ನು ಸರಿಯಾಗಿ ಹೊಂದಿ ಸಿಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಹಿಂದೆ ತರಾತುರಿಯಲ್ಲಿ ಮಾಡಿರುವ ಆದೇಶಗಳನ್ನು ತಿರುಚಿ ಅದನ್ನು ಸರಿಪಡಿಸುವ ಕಾರ್ಯದಲ್ಲಿ ಕೆಲವು ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ತೊಡಗಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕಚೇರಿ ವೇಳೆ ಮುಗಿದರೂ ಅಧಿಕಾರಿ ಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿ ಸುತ್ತಿರುವ ದೃಶ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಚೇರಿಗೆ ಮಂಗಳವಾರ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT