ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗುಡಿಸಲು ತೆರವು

Last Updated 19 ಏಪ್ರಿಲ್ 2011, 6:55 IST
ಅಕ್ಷರ ಗಾತ್ರ

ಮಂಡ್ಯ: ನಗರದ ತಾವರೆಗೆರೆ ಬಡಾವಣೆಯಲ್ಲಿ ನಗರಸಭೆಗೆ ಸೇರಿದ ನಿವೇಶನಗಳಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಗುಡಿಸಲು, ನಿರ್ಮಾಣಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ಜೆಸಿಬಿ ಯಂತ್ರ ಬಳಸಿ ತೆರವು ಗೊಳಿಸಿತು. ತಾವರೆಗೆರೆಯಲ್ಲಿ ನಗರಸಭೆಗೆ ಸೇರಿದ ಸುಮಾರು 20 ನಿವೇಶನಗಳು ಇದ್ದು, ಅವುಗಳ ವಾಸ್ತವ ಸ್ಥಿತಿ ಪರಿಶೀಲಿಸಲು ತೆರಳಿದ್ದಾಗ ಅಕ್ರಮ ವಾಗಿ ಗುಡಿಸಲು ತಲೆ ಎತ್ತಿರುವುದು ತಿಳಿದುಬಂದಿತ್ತು.

ಕಾರ್ಯಪ್ರವೃತ್ತರಾದ ನಗರಸಭೆ ಆಡಳಿತ ಸೋಮವಾರ ಸಿಬ್ಬಂದಿ, ಜೆಸಿಬಿ ಯಂತ್ರದೊಂದಿಗೆ ತೆರಳಿ ಅನಧಿಕೃತ ನಿರ್ಮಾಣಗಳನ್ನು ತೆರವು ಗೊಳಿಸಿತು. ‘ಕೆಲವರ ಕುಮ್ಮಕ್ಕಿನಿಂದ ಗುಡಿಸಲು ಹಾಕಲಾಗಿತ್ತು. ನಗರಸಭೆ ಆಸ್ತಿ ರಕ್ಷಣೆ ಕ್ರಮವಾಗಿ ತೆರವುಗೊಳಿಸಲಾಯಿತು’ ಎಂದು ತೆರವು ಸಂದರ್ಭ ದಲ್ಲಿ ಹಾಜರಿದ್ದ ನಗರಸಭೆ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಪ್ರತಿಕ್ರಿಯಿ ಸಿದರು.

ನಗರಸಭೆಗೆ ಸಂಪನ್ಮೂಲ ಕ್ರೋಡೀ ಕರಣದ ಕ್ರಮವಾಗಿ ನಗರಸಭೆಯ ಸುಪರ್ದಿಯಲ್ಲಿರುವ ನಿವೇಶನಗಳನ್ನು ಹರಾಜು ಮಾಡಲು ಈಚೆಗೆ ಈ ಹಿಂದೆ ನಾಗಮಣಿ ಅವರು ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ತೆಗೆದು ಕೊಳ್ಳಲಾಗಿತ್ತು. ಈ  ನಿರ್ಣಯಯವನ್ನು ಜಾರಿಗೊಳಿಸಲು ಪ್ರಕ್ರಿಯೆ ನಡೆದಿದ್ದು, ಹರಾಜಿಗೆ ಪೂರ್ವ ಭಾವಿಯಾಗಿ ನಿವೇಶನಗಳ ನಕ್ಷೆ, ಪ್ಲಾನ್, ದಾಖಲೆಗಳನ್ನು ಸಜ್ಜು ಗೊಳಿಸಲು ನಗರಸಭೆ ಆಡಳಿತ ಮುಂದಾಗಿತ್ತು. ಇದರ ಅಂಗವಾಗಿ ನಿವೇಶನದ ಸ್ಥಳ ಪರಿಶೀಲನೆಗೆ ತೆರಳಿದಾಗ ಅತಿಕ್ರಮಣ ಆಗಿರುವುದು  ತಿಳಿದುಬಂದಿತ್ತು.

ಸುಮಾರು 15 ನಿವೇಶನಗಳಲ್ಲಿ ಗುಡಿಸಲುಗಳು ತಲೆ ಎತ್ತಿದ್ದವು. ಈ ಪೈಕಿ ಒಂದು ಗುಡಿಸಲಿಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಲಾಗಿತ್ತು ಎಂಬುದು ತೆರವು ಕಾರ್ಯಾಚರಣೆಗೆ ತೆರಳಿದ್ದ ಅಧ್ಯಕ್ಷರು, ಸಿಬ್ಬಂದಿಗೆ ಆಶ್ಚರ್ಯವನ್ನು ಮೂಡಿಸಿದೆ. ಯಾವ ಆಧಾರದಲ್ಲಿ ವಿದ್ಯುತ್ ಸಂಪರ್ಕ ಕೊಡಲಾಗಿತ್ತು ಎಂಬ ಬಗೆಗೆ ವಿವರಣೆ ಕೋರಿ ನಗರಸಭೆಯಿಂದ ಸೆಸ್ಕ್‌ಗೆ ಪತ್ರವನ್ನು ಬರೆಯಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. ತೆರವು ಕಾರ್ಯಾಚರಣೆಯ ವೇಳೆ ಸದಸ್ಯ ರಾದ ಶಂಕರೇಗೌಡ, ಕುಮಾರ್ ಅವರು ಹಾಜರಿದ್ದರು.

ಈ ನಡುವೆ, ನಗರಸಭೆಗೇ ಭವಿಷ್ಯದಲ್ಲಿ ಯಾವುದಾದರೂ ಉದ್ದೇಶಕ್ಕೆ ಈ ನಿವೇಶನಗಳು ಬೇಕಾಗ ಬಹುದು ಎಂಬುದರ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿ ರುವಂತೆ ಖಾಲಿ ನಿವೇಶನಗಳನ್ನು ಹರಾಜು ಮಾಡುವ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT