ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ದಂಧೆಗಳ ಅಡ್ಡೆಗಳಾದ ಸಂತ್ರಸ್ತರ ಶೆಡ್!

Last Updated 14 ಜನವರಿ 2011, 10:15 IST
ಅಕ್ಷರ ಗಾತ್ರ

ಕುಷ್ಟಗಿ: ‘ಅವು ಅತಿವೃಷ್ಟಿಯಿಂದ ಜೀವ ನ್ಮರಣ ಹೋರಾಟ ನಡೆಸಿದ್ದ ಸಂತ್ರಸ್ತ ರನ್ನು ರಕ್ಷಿಸುವ ಸಲುವಾಗಿ ಆಗ ಸರ್ಕಾರ ನಿರ್ಮಿಸಿದ ತಾತ್ಕಾಲಿಕ ಶೆಡ್‌ಗಳು ಇದರಲ್ಲಿ ಉಳಿದ ಎಷ್ಟೋ ಜನ ಬದುಕುಳಿದದ್ದು ಇತಿಹಾಸ. ಆದರೆ ಸದ್ಯ ಕಾನೂನು ಬಾಹಿರ, ಅಕ್ರಮ ಚಟುವಟಿಕೆಗಳ ಪಕ್ಕಾ ಅಡ್ಡೆ ಗಳಿವು!?.

 ತಾಲ್ಲೂಕಿನ ಬಿಜಕಲ್ ಗ್ರಾಮದ ಹೊರವಲಯದಲ್ಲಿನ 30ಕ್ಕೂ ಅಧಿಕ ತಾತ್ಕಾಲಿಕ ಸರ್ಕಾರಿ ಶೆಡ್‌ಗಳಲ್ಲಿ ಕಂಡುಬರುವ ಸ್ಥಿತಿ ಇದು. ಹಗಲಿನಲ್ಲಿ ಇಸ್ಪೇಟ್ ಮತ್ತಿತರೆ ಜೂಜಾಟ, ಪುಂಡ ಪೋಕರಿಗಳಿಗೆ ಪ್ರಶಸ್ತ ತಾಣವಾದರೆ, ಸಂಜೆಯಾಗುತ್ತಿದ್ದಂತೆ ಈ ಪ್ರದೇಶ ಮದ್ಯ ಅಂಗಡಿಗಳು, ಕರಿದ ಮಾಂಸ, ಕುದಿಸಿದ ಮೊಟ್ಟೆ ಬಜಾರ್ ಆಗಿ ಪರಿವರ್ತನೆಗೊಳ್ಳುತ್ತದೆ. ಇತರೆ ಅಕ್ರಮ ಚಟುವಟಿಕೆಗಳೂ ಇಲ್ಲಿ ನಡೆಯುತ್ತವೆ ಎಂಬುದನ್ನು ಪ್ರತ್ಯೇಕ ವಾಗಿ ಹೇಳಬೇಕಿಲ್ಲ.

ಸಾರ್ವಜನಿಕರ ದೂರಿನ ಹಿನ್ನೆಲೆ ಯಲ್ಲಿ ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದಾಗ ಬಹುತೇಕ ಶೆಡ್‌ಗಳಲ್ಲಿ ಜನ ವಸತಿ ಇರಲಿಲ್ಲ, ಆದರೆ ಇದ್ದ ಕೆಲವರು ಮದ್ಯ, ಮಾಂಸದ ವ್ಯಾಪಾರಿಗಳು. ಕೆಲವರು ಅನಗತ್ಯವಾಗಿ ಅತಿಕ್ರಮಿಸಿ ಕೊಂಡಿರುವ ಶೆಡ್‌ಗಳನ್ನು ಇಸ್ಪೇಟ್ ಆಟಕ್ಕೆ ಬಾಡಿಗೆ ನೀಡಿದ್ದೂ ಉಂಟು. ಅಷ್ಟೇ ಅಲ್ಲ  ಬಹುತೇಕ ಶೆಡ್‌ಗಳಲ್ಲಿ ಕಟ್ಟಿಗೆ, ಮೇವು ಕೆಲಸಕ್ಕೆ ಬಾರದ ಇತರೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು ಕಂಡುಬಂದಿತು.

ಕೆಲವರು ಮನೆಗಳು ಇದ್ದರೂ ಸರ್ಕಾರದಿಂದ ಇನ್ನೂ ಏನಾದರೂ ಪರಿಹಾರ ದೊರೆಯಬಹುದು ಎಂಬುದಕ್ಕೆ ಅಲ್ಲೇ ತಳವೂರಿ ಶೆಡ್‌ಗಳಲ್ಲಿ ಅಕ್ರಮ ಚಟುವಟಿಕೆಗೆ ‘ಆಶ್ರಯ’ ನೀಡಿದ್ದಾರೆ. ಅಲ್ಲದೇ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಶೆಡ್ ಗಳಲ್ಲಿ ಉಳಿದುಕೊಂಡವರು ಮತ್ತೆ ಸರ್ಕಾರವನ್ನೇ ದೂಷಿಸುವುದು ಸಾಮಾನ್ಯ ಸಂಗತಿ.ಮುಖ್ಯರಸ್ತೆಯಲ್ಲಿ ನೂರಾರು ಮಕ್ಕಳು ಬಂದುಹೋಗುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದರೆ ಪಕ್ಕದಲ್ಲಿನ ಮಳಿಗೆಯಲ್ಲಿ ಯಾವ ಅಳುಕು ಇಲ್ಲದೇ ಯಥೇಚ್ಛ ಮದ್ಯ ಮಾರಾಟ ನಡೆಯುತ್ತಿದೆ. ಆಕ್ಷೇಪಿಸಿದ ವರಿಗೆ ಕೆಲ ಪಟ್ಟಭದ್ರರು ಕಿರಿಕ್ ಮಾಡುತ್ತಾರೆ.

ಅಷ್ಟೇ ಅಲ್ಲ ದೋಟಿ ಹಾಳ, ಕುಷ್ಟಗಿಯಿಂದ ಸರಬರಾಜಾ ಗುವ ಅಕ್ರಮ ಮದ್ಯ ಊರಿನಲ್ಲಿ ಒಟ್ಟು ಐದು ಕಡೆ ಮಾರಾಟವಾಗುತ್ತದೆ ಎಂದು ಜನ ದೂರಿದರು. ಅಲ್ಲದೇ ತಾನು ದಿನಕ್ಕೆ ಕನಿಷ್ಟ 12 ಬಾಟಲಿ ಗಳನ್ನು ಮಾರುವುದಾಗಿ ಒಬ್ಬ ಮಹಿಳೆ ಹೇಳಿದ್ದು ಅಚ್ಚರಿ ಮೂಡಿಸಿತು.ಇಸ್ಪೇಟ್ ತಾಣ ದೇವಸ್ಥಾನ: ದೇವ ಸ್ಥಾನ ಹೆಸರಿಗೆ ಮಾತ್ರ. ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಸಾಕಷ್ಟು ಜನ ಊರಿನ ಪ್ರಮುಖರೇ ಗುಂಪು ಗುಂಪಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುತ್ತಾರೆ.

ಜನಸಾಮಾನ್ಯರು, ಮಕ್ಕಳು, ಮಹಿಳೆಯರು ದೇವರ ದರ್ಶನಕ್ಕೂ ಪರದಾಡುವಂತಾಗಿದೆ ಎಂಬ ಅಳಲು ಕೇಳಿಬಂದಿತು. ಊರು ಗುಡಿಗುಂಡಾರ ಗಳೆಲ್ಲ ಜೂಜಾಟ, ಅಕ್ರಮಗಳ ತಾಣಗಳಾಗಿದ್ದರೂ ಪೊಲೀಸರು, ಅಬಕಾರಿ ಇಲಾಖೆಯ ವರಿಗೆ ‘ಪ್ರಸಾದ’ ವ್ಯವಸ್ಥಿತ ರೀತಿಯಲ್ಲಿ ತಲುಪುತ್ತಿರುವುದರಿಂದ ಇಂಥ ದಂಧೆಗೆ ಕಡಿವಾಣ ಬೀಳುತ್ತಿಲ್ಲ, ಕುಡುಕರ ಕಾಟದಿಂದ ಮಹಿಳೆಯರು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ, ಅದರ ವಿರುದ್ಧ ಮಾತನಾಡುವುದೇ ಕಷ್ಟವಾಗಿದೆ ಎಂದು ಜನರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT