ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ತಡೆಗೆ ಆಗ್ರಹಿಸಿ ಮನವಿ

Last Updated 4 ಜುಲೈ 2012, 6:50 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸ ಬೇಕೆಂದು ಆಗ್ರಹಿಸಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಕಾರ್ಯಕರ್ತೆ ಯರು ಸೋಮವಾರ ತಹಶೀಲ್ದಾರ ಹಾಗೂ ಸಿಪಿಐ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸ ಬೇಕೆಂದು ಆಗ್ರಹಿಸಿ ಗ್ರಾಮದ ಹಲ ವಾರು ಮಹಿಳೆಯರು ಗ್ರಾಮದ ಮುಖಂಡರೊಡನೆ ತಾಲ್ಲೂಕು ಅಂಬೇಡ್ಕರ್ ದಲಿತ ಚಳವಳಿ ವೇದಿಕೆಯ ನೇತೃತ್ವದಲ್ಲಿ ಕಳೆದ ಜೂನ್ 25ರಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳು ಗ್ರಾಮದ ಮಹಿಳೆಯರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದೆ ಇದ್ದುದ್ದರಿಂದ ಗ್ರಾಮದಲ್ಲಿ ಈಗಲೂ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಲಿದೆ ಎಂದು ಅವರು ದೂರಿದರು.

ಬಡ ಕೂಲಿ ಕಾರ್ಮಿಕರನ್ನು ರಕ್ಷಿ ಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿ ಕಾರಿಗಳು ತಕ್ಷಣ ಹಳ್ಳಿಕೇರಿ ಗ್ರಾಮಕ್ಕೆ ಆಗಮಿಸಿ ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ಮತ್ತು ಗ್ರಾಮವನ್ನು ಮದ್ಯಮುಕ್ತ ಗ್ರಾಮ ವನ್ನಾಗಿ ಪರಿ ವರ್ತಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ತಾಲ್ಲೂಕು ಅಂಬೇಡ್ಕರ್ ದಲಿತ ಚಳುವಳಿ ವೇದಿಕೆಯ ಅಧ್ಯಕ್ಷ ಲಕ್ಷ್ಮಣ ತಗಡಿನಮನಿ, ಉಪಾಧ್ಯಕ್ಷ ಫಕ್ಕಿರೇಶ ದೊಡ್ಡಮನಿ, ಪುಂಡಲೀಕ ಲೇಂಡ್ವೆ, ಯಲ್ಲವ್ವ ಬೆಟಗೇರಿ, ಲಕ್ಷ್ಮವ್ವ ಹೈತಾ ಪೂರ, ದೇವಕ್ಕ ಮುದ್ಲಾಪೂರ, ನಿಂಗಪ್ಪ ಡೋಣಿ, ಶರಣಪ್ಪ ಮಾಯಮ್ಮನವರ, ದೇವವ್ವ ಬಿನ್ನಾಳ, ಶಿದ್ದವ್ವ ಮಲ್ಲಕ್ಕಿ, ರೇಣುಕಾ ಪೂಜಾರ, ಅಂಬವ್ವ ತಳವಾರ, ದುರ್ಗವ್ವ ಡೋಣಿ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT