ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ: ಪ್ರತಿಭಟನೆ

Last Updated 9 ಸೆಪ್ಟೆಂಬರ್ 2011, 9:50 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲೂಕಿನ ದೊಡ್ಡ ಗ್ರಾಮಗಳಲ್ಲೊಂದಾದ ಕೋಡದಲ್ಲಿ ಮದ್ಯ ಮಾರಾಟ ಮಾಡುತ್ತಿರುವು ದನ್ನು ನಿಷೇಧಿಸಬೇಕು, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ರೈತ ಸಂಘದ ಸಹಕಾರದೊಂದಿಗೆ ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಮದ್ಯ ಮಾರಾಟ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ವಾಗಿ ಗ್ರಾಮದಲ್ಲಿ ನೆಮ್ಮದಿಯ ವಾತಾ ವಾವರಣ ಇಲ್ಲದಂತಾಗಿದೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 ಬೇರೆ ಊರಿನ ಪರವಾನಿಗೆಯನ್ನು ಹೊಂದಿರುವ ಮದ್ಯದ ಅಂಗಡಿ ಯವರು ಕೋಡ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಕುಡಿತದ ಚಟದಿಂದ ಅನೇಕ ಅವಘಡಗಳು ಸಂಭವಿಸುತ್ತಿದ್ದು ಕೂಡಲೇ ಇದನ್ನು ನಿಲ್ಲಿಸಬೇಕು ಹಾಗೂ ಗ್ರಾಮದಲ್ಲಿ ಕೇಲವರು ಅಕ್ರಮ ವಾಗಿ ಮಾರಾಟ  ಮಾಡು ತ್ತಿದ್ದು ಅಂತವರ ಮೇಲೆ ಕಾನೂನು ಕ್ರಮ ಜರುಗಿಸಿ ಗ್ರಾಮವನ್ನು ಪಾನ ಮುಕ್ತ ಗ್ರಾಮವನ್ನಾಗಿ ಮಾಡ ಬೇಕು ಎಂದು ತಹಶೀಲ್ದಾರರನ್ನು ಒತ್ತಾಯಿ ಸಿದರು.

ಪ್ರತಿಭಟನೆಯ ನಂತರ ತಹಶೀಲ್ದಾರ ಇಸ್ಮಾಯಿಲ್‌ಸಾಬ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಬಸನಗೌಡ ಗಂಗಪ್ಪಳವರ, ಗಂಗ್ರಾಮಸ್ಥರಾದ ನಾಗರಾಜ ಮಲ್ಲೂರ, ಈರಪ್ಪ  ಗೋಣಿಮಠ, ಗೋಣಿಬಸಪ್ಪ ಮಲ್ಲೂರ, ಬಸನಗೌಡ ಕೆವಾಡಿ, ಮಂಜಪ್ಪ ಕೆಂಚಣ್ಣನವರ, ಹಿಟ್ಟಿಗೌಡ ಕಬ್ಬಕ್ಕಿ, ಚೌಡಪ್ಪ ಮಲ್ಲೂರ, ಶೇಶಿಕಲಾ ಕೆಳಗೇರಿ, ಮರಿಗೊಣೇಪ್ಪ ದೂಳಣ್ಣ ನವರ, ಲೋಕನಗೌಡ ಹೊಸಳ್ಳಿ, ಹನು ಮಂತಪ್ಪ ನರಸಾಪೂರ, ಸುಭಾಷ್ ಮಲ್ಲೂರ, ಲಕ್ಷ್ಮವ್ವ, ಸುಭದ್ರಕ್ಕ ನರಸಾಪೂರ, ಲಕ್ಷ್ಮವ್ವ ಕೂಲೇರ, ಜೀವನ ನಡುಗೇರ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT