ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ....

Last Updated 14 ಅಕ್ಟೋಬರ್ 2011, 6:50 IST
ಅಕ್ಷರ ಗಾತ್ರ

ಗುತ್ತಲ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಹಾವೇರಿ ತಹಸೀಲದಾರರ ನೇತೃತ್ವದಲ್ಲಿ ಗುರು ವಾರ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ನಾಶಪಡಿಸಿದ್ದಾರೆ.

ತಹಸೀಲದಾರ ಶಿವಲಿಂಗು ಅವರ ನೇತೃತ್ವದ ಅಧಿಕಾರಿಗಳ ತಂಡ ಬೆಳಿಗ್ಗೆ ಯಿಂದಲೇ ಸಮೀಪದ ಬೆಳವಿಗಿ, ಮರೋಳ, ನೀರಲಗಿ ಹಾಗೂ ತೇರದ ಹಳ್ಳಿ ಗ್ರಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ದಾಳಿ ವೇಳೆ ಆರು ಯಾಂತ್ರಿಕ ದೋಣಿ, ಪೈಪ್, ಉಸುಕಿನ ಚೀಲ ಸೇರಿದಂತೆ ಅಕ್ರಮ ಮರಳು ಗಣಿ ಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ ಇನ್ನಿತರೆ ವಸ್ತುಗಳನ್ನು ನಾಶಪಡಿಸಲಾ ಗಿದ್ದು, ಇವುಗಳ ಒಟ್ಟು ಮೌಲ್ಯ 20 ಲಕ್ಷ ರೂಪಾಯಿ ಎಂದು ಅಂದಾಜಿಸ ಲಾಗಿದೆ.

ಅಲ್ಲದೆ ಎರಡು ಜೆಸಿಬಿ ಯಂತ್ರಗಳನ್ನು ದಾಳಿಗೆ ಉಪಯೋಗಿ ಸಲಾಗಿದೆ. ಗುತ್ತಲ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆ ಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

`ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿ ಸಿದೆ. ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆಗೆ ತಾಲ್ಲೂಕಿನಲ್ಲಿ ಅವಕಾಶ ನೀಡುವುದಿಲ್ಲ~ ಎಂದು ತಹ ಸೀಲ್ದಾರ ಶಿವಲಿಂಗು ಎಚ್ಚರಿಸಿದರು.

ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಶಬ್ಬೀರ ಅಹ್ಮದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜಿ. ಶೇಖರಪ್ಪ, ಎಇ ಲಿಂಗಪ್ಪ, ಗುತ್ತಲ ಪೊಲೀಸ್ ಠಾಣೆ ಪಿಎಸ್‌ಐ ಜಾಕ್ಸನ್ ಡಿಸೋಜಾ, ಕಂದಾಯ ನಿರೀಕ್ಷಕ ಯರಿಮನಿ, ಹಳ್ಳಕಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT