ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಕ್ರಮಕ್ಕೆ ದಂಡ ನಿಗದಿ

ರಾಜ್ಯ ಸಂಪುಟದ ಮಹತ್ವದ ತೀರ್ಮಾನ
Last Updated 10 ಜನವರಿ 2014, 20:35 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಕ್ಕೆ ಶೇ 5ರಿಂದ 20ರ ವರೆಗೆ ದಂಡ ವಿಧಿ­ಸಲು  ಸಚಿವ ಸಂಪುಟ ಸಭೆ ತೀರ್ಮಾನಿ­ಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ­ಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು. ಅಕ್ರಮ ಮನೆಗಳ ಸಕ್ರಮಕ್ಕಾಗಿ ಕರ್ನಾ­ಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 94(ಸಿ)ಗೆ ತಿದ್ದುಪಡಿ ತರಲಾ­ಗಿತ್ತು. ಈಗ ದಂಡದ ಪ್ರಮಾಣ­ವನ್ನು ನಿಗದಿಪಡಿಸಲಾಗಿದೆ (ಬಾಕ್ಸ್ ನೋಡಿ).

ನಿಯಮಾವಳಿಗಳನ್ನು ರೂಪಿ­ಸಿದ ನಂತರ ಸಕ್ರಮದ ಅರ್ಜಿ­ಗಳನ್ನು ಆಹ್ವಾನಿ­ಸ­ಲಾಗುತ್ತದೆ.

ಬಿ.ಇಡಿಗೆ ಅವಕಾಶ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸು­ತ್ತಿರುವ 1,349 ಉಪನ್ಯಾಸ­ಕರಿಗೆ ಬಿ.­ಇಡಿ ವ್ಯಾಸಂಗಕ್ಕೆ ವೇತನ ಸಹಿತ ರಜೆ ನೀಡಲು ಹಾಗೂ ಅವರ ಜಾಗಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ­ಕೊಳ್ಳಲು ತೀರ್ಮಾನಿಸಲಾಗಿದೆ.

ರಾಜ್ಯದ ನಾಗರಿಕ ಸೇವೆಗಳ ಸಮೂಹ ‘ಎ’ ಶ್ರೇಣಿ (ಕೆಎಎಸ್‌ ಮತ್ತಿತರ) ಅಧಿಕಾರಿಗಳಿಗೆ  ಮನೆ ನಿರ್ಮಾ­ಣಕ್ಕಾಗಿ ₨ 25 ಲಕ್ಷ ಮುಂಗಡ ಹಣ ನೀಡಲು ಒಪ್ಪಿಗೆ ನೀಡಲಾಗಿದೆ. ಇದುವರೆಗೆ ಐಎಎಸ್‌ ಅಧಿಕಾರಿಗಳಿಗೆ ಮಾತ್ರ ₨ 25 ಲಕ್ಷ  ನೀಡಲಾಗುತ್ತಿತ್ತು.

ಅಕ್ಕಿ ಇಳಿಕೆ, ಗೋಧಿ ಏರಿಕೆ
ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ  ಪ್ರಮಾಣ ಕಡಿಮೆ ಮಾಡಿ ಅಷ್ಟೇ ಪ್ರಮಾಣ­ದಲ್ಲಿ ಹೆಚ್ಚು ಗೋಧಿ ನೀಡ­ಲಾ­ಗುತ್ತದೆ. 

ಉತ್ತರ ಕರ್ನಾ­ಟಕ­ದಲ್ಲಿ ಕುಟುಂಬದ ಸದಸ್ಯ­ರನ್ನು  ಆಧರಿಸಿ ನೀಡಲಾಗುತ್ತಿದ್ದ 2,3,5 ಕೆ.ಜಿ ಗೋಧಿ ಪ್ರಮಾಣವು ಈಗ 4,6,10 ಕೆ.ಜಿ ಗಳಷ್ಟಾಗುತ್ತದೆ. ದ.ಕ ಭಾಗದಲ್ಲಿ  1,2,3 ಕೆ.ಜಿ. ಗೋಧಿ ಬದಲಾಗಿ, ಇನ್ನು ಮುಂದೆ ಕ್ರಮವಾಗಿ 2,4,6 ಕೆ.ಜಿ. ಗೋಧಿ ನೀಡಲಾಗುತ್ತದೆ .

₨ 2 ಪ್ರೋತ್ಸಾಹ ಧನ
ಸರ್ಕಾರಿ ಶಾಲೆಗಳ ಒಂದನೇ ತರಗತಿ ಹುಡುಗಿಯರಿಗೆ ಪ್ರತಿದಿನದ ಹಾಜ­ರಾತಿಗೆ ₨ 2 ಪ್ರೋತ್ಸಾಹ­ಧನ ನೀಡುವ ಯೋಜನೆ­ಯನ್ನು 2014 ಜನವರಿ  1ರಿಂದಲೇ ಪೂರ್ವಾನ್ವಯ­ವಾಗಿ ಜಾರಿಗೆ ತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT