ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರೆಕ್ಸ್ ಪ್ರದರ್ಶನ ಉದ್ಘಾಟನೆ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏರ್‌ಕಂಡೀಷನ್, ರೆಫ್ರಿಜರೇಷನ್ ಸಾಧನ ಸಲಕರಣೆಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ `ಆಕ್ರೆಕ್ಸ್~ ಸಮಾವೇಶಕ್ಕೆ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಗುರುವಾರ ಚಾಲನೆ ನೀಡಲಾಯಿತು.

ಭವಿಷ್ಯದ ಹೊಸ ಸಂಶೋಧನೆ, ಸುಸ್ಥಿರ ಮತ್ತು ತಾಂತ್ರಿಕ ಉತ್ಪನ್ನಗಳನ್ನು  ಪರಿಚಯಿಸಲು ಈ ಮೇಳವು ಉತ್ತಮ ವೇದಿಕೆಯಾಗಿದೆ. ದಕ್ಷಿಣ ಏಷ್ಯಾದಲ್ಲಿಯೇ ಇದೊಂದು ಅತಿದೊಡ್ಡ ಪ್ರದರ್ಶನ ಮೇಳ ಇದಾಗಿದೆ. ಹದಿಮೂರನೇ ಬಾರಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಪ್ಲಂಬಿಂಗ್ ಸೇವೆ, ದೀಪ, ಬೆಂಕಿ ನಿರ್ವಹಣೆ, ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಉತ್ಪನ್ನ ಮತ್ತು ಸೇವೆಗಳನ್ನು ದೇಶ - ವಿದೇಶಗಳ ಸಂಸ್ಥೆಗಳು ಪ್ರದರ್ಶಿಸುತ್ತಿವೆ. 25 ದೇಶಗಳಿಗೆ ಸೇರಿದ 400 ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ. ಪ್ರದರ್ಶನವು ಈ ತಿಂಗಳ 25ರವರೆಗೆ ನಡೆಯಲಿದೆ.

`ಪ್ರಾಣ~ ಉದ್ಘಾಟನೆ: ಭವಿಷ್ಯದ ದಿನಗಳಲ್ಲಿ ಇಂಧನ ಉಳಿತಾಯ, ಪರಿಸರ ಸಂರಕ್ಷಣೆ ಸದುದ್ದೇಶ  (ನಾಳಿನ ಹಸಿರಿಗಾಗಿ) ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಲು `ಪ್ರಾಣ~ ಹೆಸರಿನ ಗೃಹ ಕಚೇರಿ ಮಾದರಿಯನ್ನೂ `ಬಿಐಇಸಿ~ಯಲ್ಲಿ ಉದ್ಘಾಟಿಸಲಾಗಿದೆ.

ಸ್ಥಳೀಯ ಮತ್ತು ಪುನರ್ ಬಳಕೆಯ ವಸ್ತುಗಳನ್ನು ಬಳಸಿ ನಿರ್ಮಿಸಿರುವ ಈ ಮಾದರಿ `ಗೃಹ ಕಚೇರಿ~ಯು ಸೌರಶಕ್ತಿ ಬಳಕೆ, ಸೌರಶಕ್ತಿ ಚಾಲಿತ ಫ್ರಿಜ್,  ಭೂಮಿ ಒಳಗಿನ ಉಷ್ಣತೆಯನ್ನೇ ಹವಾನಿಯಂತ್ರಣ ವ್ಯವಸ್ಥೆಗೆ ಬಳಸುವ, ಮಳೆ ನೀರು ಸಂಗ್ರಹ ಮತ್ತಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸಂಪನ್ಮೂಲ ಬಳಕೆ ನಿಯಂತ್ರಿಸುವ, ಪರಿಸರ ಸ್ನೇಹಿ ಸಾಂಪ್ರದಾಯಿಕ ಮನೆಗಳ ನಿರ್ಮಾಣಕ್ಕಿಂತ `ಪ್ರಾಣ~ದ ಮಾದರಿಯಲ್ಲಿ ಗೃಹ ಕಚೇರಿ ನಿರ್ಮಾಣಕ್ಕೆ ಪ್ರತಿ ಚದರ ಅಡಿಗೆ 200 ರಿಂದ 500ವರೆಗೆ ಹೆಚ್ಚುವರಿ ವೆಚ್ಚ ತಗಲುತ್ತದೆ ಎಂದು ಆಕ್ರೆಕ್ಸ್ ಇಂಡಿಯಾ ಅಧ್ಯಕ್ಷ ನಿರ್ಮಲ್ ರಾಂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT