ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯಕ್ಕೆ ತಕ್ಕಂತೆ ಬದಲಾವಣೆ: ಸಂದೀಪ್

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿರುವ ಭಾರತ ಹಾಕಿ ತಂಡದ `ಡ್ರ್ಯಾಗ್ ಫ್ಲಿಕ್ಕರ್~  ಸಂದೀಪ್ ಸಿಂಗ್, `ಅಗತ್ಯಕ್ಕೆ ತಕ್ಕಂತೆ ಡ್ರ್ಯಾಗ್ ಫ್ಲಿಕ್ಕಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಲು ಯತ್ನಿಸುತ್ತೇನೆ~ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಸಂದೀಪ್ ಉತ್ತಮ ಪ್ರದರ್ಶನ ನೀಡಿದ್ದರು. `ಡ್ರ್ಯಾಗ್ ಫ್ಲಿಕ್ಕಿಂಗ್‌ನಲ್ಲಿ ಇನ್ನಷ್ಟು ನೈಪುಣ್ಯತೆ ಸಾಧಿಸಲು ಕಠಿಣ ಶ್ರಮ ಪಡುತ್ತಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳಲ್ಲಿ ಭಾರತ ಸಹ ಉತ್ತಮ ಪೈಪೋಟಿ ನೀಡಬಲ್ಲ ತಂಡ~ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

`ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಳೆದ ಆರು ತಿಂಗಳಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇವೆ. ದಕ್ಷಿಣ ಆಫ್ರಿಕಾ, ಫ್ರಾನ್ಸ್ ಹಾಗೂ ಇಂಗ್ಲೆಂಡ್ ತಂಡಗಳ ಜೊತೆ ಪಂದ್ಯಗಳನ್ನಾಡಿರುವುದು ಕೂಡಾ ತಂಡದ ವಿಶ್ವಾಸ ಹೆಚ್ಚಿದೆ. ಲಂಡನ್‌ನಲ್ಲಿ ದೊಡ್ಡ ಹೋರಾಟಕ್ಕೆ ಸಜ್ಜುಗೊಳ್ಳಲು ನೆರವಾಗಲಿದೆ. ಪುಣೆಯಲ್ಲಿ ಪಡೆದ ತರಬೇತಿಯಿಂದ ಉತ್ತಮಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗಿದೆ~ ಎಂದು ಸ್ಪೇನ್‌ನ ಲಾ ಅಲ್ಬೆರಿಸಿಯದಿಂದ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಸಂದೀಪ್ ಹೇಳಿದ್ದಾರೆ. ಭಾರತ ಹಾಕಿ ತಂಡ ಟೆಸ್ಟ್ ಸರಣಿಯನ್ನಾಡಲು ಸ್ಪೇನ್‌ನಲ್ಲಿ ತಂಗಿದೆ.

ನೀಲಿ ಟರ್ಫ್ ಸಮಸ್ಯೆಯಲ್ಲ: ನೀಲಿ ಟರ್ಫ್‌ನ ಬಗ್ಗೆ ಕೇಳಲಾದ ಪ್ರಶ್ನೆಗೆ, `ದಯವಿಟ್ಟು ನಕಾರಾತ್ಮಕ ಅಂಶಗಳತ್ತ ಗಮನ ನೀಡಬೇಡಿ. ನೀಲಿ ಟರ್ಫ್ ಕಷ್ಟವೇನಲ್ಲ. ಯಾವುದೇ ಸಮಸ್ಯೆಯಿಲ್ಲ~ ಎಂದು ಖಡಕ್ಕಾಗಿ ಉತ್ತರ ನೀಡಿದರು.
`ನೀಲಿ ಟರ್ಫ್‌ನಲ್ಲಿ ಯಾವುದೇ ಭೀತಿಯಿಲ್ಲದೆ ಆಡಬಹುದು. ಹಾಕಿ ಟೆಸ್ಟ್ ಸರಣಿ, ಸುಲ್ತಾನ್ ಅಜ್ಲನ್ ಷಾ ಕಪ್ ಟೂರ್ನಿಯ ಪಂದ್ಯಗಳನ್ನು ಇದೇ ಬಣ್ಣದ ಟರ್ಫ್‌ನಲ್ಲಿ ಆಡಿದ್ದೇವೆ. ಅಷ್ಟೇ ಅಲ್ಲ, ಹೊಸ ಬಣ್ಣದ ಟರ್ಫ್‌ಗೆ ಹೊಂದಿಕೊಳ್ಳಲು ಹೆಚ್ಚೆಚ್ಚು ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದೇವೆ~ ಎಂದು ಡ್ರ್ಯಾಗ್ ಫ್ಲಿಕ್ಕರ್ ಹೇಳಿದ್ದಾರೆ.

ಮೊದಲ ಆರು ಸ್ಥಾನಗಳಲ್ಲಿ ಒಂದನ್ನು ಭಾರತ ಗಿಟ್ಟಿಸಬೇಕು ಎನ್ನುವ ಕೋಚ್ ಮೈಕಲ್   ನಾಬ್ಸ್ ಅಭಿಪ್ರಾಯಕ್ಕೆ `ನಮ್ಮ ಗುರಿ ಯಾವಾಗಲೂ ಅಗ್ರಸ್ಥಾನದ ಮೇಲಿರಬೇಕು~ ಎಂದು ಸಂದೀಪ್ ಪ್ರತಿಕ್ರಿಯಿಸಿದ್ದಾರೆ.

ವಿಡಿಯೊ ವಿಶ್ಲೇಷಣೆ
: `ತಪ್ಪುಗಳನ್ನು ಗುರುತಿಸಿ, ಸರಿಪಡಿಸಿಕೊಳ್ಳಲು ವಿಡಿಯೊ ವಿಶ್ಲೇಷಣೆ ನೆರವಾಗಿದೆ. ನಮ್ಮ ದೌರ್ಬಲ್ಯಗಳನ್ನು ವಿಡಿಯೊ ಮೂಲಕ ತಿಳಿದುಕೊಂಡು ಸರಿಪಡಿಸುವ ಯತ್ನ ಮಾಡುತ್ತಿದ್ದೇವೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ~ ಎನ್ನುತ್ತಾರೆ ಸಂದೀಪ್ ಸಿಂಗ್.

ಒತ್ತಡವಿರಲಿಲ್ಲ: ನಾಲ್ಕು ರಾಷ್ಟ್ರಗಳ ನಡುವಣ ಹಾಕಿ ಸರಣಿ ನಡೆಯುವ ವೇಳೆ ಒತ್ತಡದಲ್ಲಿದ್ದೆವು ಎನ್ನುವ ಹೇಳಿಕೆಯನ್ನು ಅವರು ಒಪ್ಪಲಿಲ್ಲ. `ನಾವು ಯಾವುದೇ ಒತ್ತಡದಲ್ಲಿ ಇರಲಿಲ್ಲ. ಆ ಸರಣಿಯಲ್ಲಿ  ಸಾಕಷ್ಟು ಆತ್ಮ ವಿಶ್ವಾಸದಿಂದ ಆಡಿದೆವು. ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಂಡು ಆಡುತ್ತಿದ್ದೆವು~ ಎಂದು ಪ್ರತಿಕ್ರಿಯೆ ನೀಡಿದರು.

`ಪುಣೆಯಲ್ಲಿ ನಡೆದ ಹಾಕಿ ಶಿಬಿರದ ವೇಳೆ ಫಿಟ್‌ನೆಸ್ ತರಬೇತಿ ನೀಡಿದ ಫಿಸಿಯೋ ಡೇವಿಡ್ ಜಾನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜಾನ್ ನೆರವಿನಿಂದ ಉತ್ತಮವಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಯುರೋಪ್ ರಾಷ್ಟ್ರಗಳ ಯಾವುದೇ ತಂಡಗಳ ಸವಾಲನ್ನು ಎದುರಿಸುತ್ತೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT