ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯಕ್ಕೆ ತಕ್ಕಂತೆ ಶ್ರವಣ ಶಕ್ತಿ ಬದಲಿಸುವ ತಿಮಿಂಗಿಲ...

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ತಿಮಿಂಗಿಲಗಳು ಈಜುವಾಗ ಹಾಗೂ ಬೇಟೆಯಾಡುವಾಗ ಅಗತ್ಯಕ್ಕೆ ತಕ್ಕಂತೆ ಶ್ರವಣ ಶಕ್ತಿಯಲ್ಲಿ ಮಾರ್ಪಾಟು ಮಾಡಿಕೊಳ್ಳುತ್ತವೆ ಎಂಬ ವಿಷಯವನ್ನು ವಿಜ್ಞಾನಿಗಳು ಇದೀಗ ಪತ್ತೆ ಹಚ್ಚಿದ್ದಾರೆ.

ಹವಾಯಿ ವಿಶ್ವವಿದ್ಯಾನಿಲಯದ ಸಂಶೋಧಕರು `ಫಾಲ್ಸ್ ಕಿಲ್ಲರ್ ವೇಲ್ಸ್~ ಎಂಬ ಪ್ರಭೇದಕ್ಕೆ ಸೇರಿದ `ಕಿನಾ~ ಎಂಬ ಹೆಣ್ಣು ತಿಮಿಂಗಿಲದ ಶ್ರವಣ ಸಾಮರ್ಥ್ಯವನ್ನು ಅಳೆಯುವ ಮೂಲಕ ಈ ತೀರ್ಮಾನಕ್ಕೆ ಬಂದಿದ್ದಾರೆ.

ಭಾರಿ ಶಬ್ದ ಅಪ್ಪಳಿಸುವ ನಿರೀಕ್ಷೆ ಇದ್ದಾಗ `ಕಿನಾ~ ತನ್ನ ಕೇಳುವ ಸಾಮರ್ಥ್ಯವನ್ನೇ ಕಡಿಮೆ ಮಾಡಿಕೊಳ್ಳುತ್ತಿತ್ತು. ಅದರ ಇಡೀ ತಲೆಯೇ ಕಿವಿಯಂತೆ ವರ್ತಿಸುತ್ತಿತ್ತು. `ಕಿನಾ~ದ ಅಸಲಿ ಕಿವಿಗೆ ಶಬ್ದದ ಅಲೆಗಳು ಹಲವು ಪಥಗಳಲ್ಲಿ ಸಂಚರಿಸುತ್ತಿದ್ದವು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ನಚ್ಟಿಗಲ್ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಡಾ. ನಚ್ಟಿಗಲ್ ತಂಡ, `ಕಿನಾ~ದ ಮಿದುಳಿನ ವಿದ್ಯುತ್ ಸಂಕೇತಗಳನ್ನು ಅಳೆಯುವ `ಸೆನ್ಸರ್~ ಒಂದನ್ನು ಅದರ ದೇಹದಲ್ಲಿ ಅಳವಡಿಸಿತ್ತು. ದೊಡ್ಡ ಶಬ್ದ ಕೇಳಿದಾಗ ದೊಡ್ಡ ವಿದ್ಯುತ್ ಅಲೆಗಳು, ಸಣ್ಣ ಶಬ್ದ ಕೇಳಿದಾಗ ಸಣ್ಣ ಅಲೆಗಳು ಅದರಲ್ಲಿ ದಾಖಲಾಗುತ್ತಿದ್ದವು. `ಫಾಲ್ಸ್ ಕಿಲ್ಲರ್ ವೇಲ್ಸ್~ಗಳು  ಹಲ್ಲುಳ್ಳ ತಿಮಿಂಗಿಲಗಳ ಜಾತಿಗೆ ಸೇರಿವೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT