ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿದವರ ನೆನಪಿಗೆ ಆಲ್ ಸೋಲ್ಸ್ ಡೇ

Last Updated 3 ನವೆಂಬರ್ 2011, 5:40 IST
ಅಕ್ಷರ ಗಾತ್ರ

ಕೆಜಿಎಫ್: ಕುಟುಂಬದಲ್ಲಿ ಅಗಲಿದ ಬಂಧುಗಳಿಗೆ ಹಾಗೂ ಹಿರಿಯರಿಗೆ ಗೌರವ ಸೂಚಿಸಿ ಪೂಜೆ ಸಲ್ಲಿಸುವ ಆಲ್ ಸೋಲ್ಸ್ ಡೇ (ಸ್ಮಶಾನ ಪೂಜೆ) ನಗರದ ಹಿಂದೂ ಮತ್ತು ಕ್ರಿಶ್ಚಿಯನ್ ಸ್ಮಶಾನಗಳಲ್ಲಿ ಬುಧವಾರ ನಡೆಯಿತು.

ನಗರದ ಕೋರಮಂಡಲ, ಚಾಂಪಿಯನ್‌ರೀಫ್ಸ್ ಮತ್ತು ಮಸ್ಕಂ ಸ್ಮಶಾನಗಳಿಗೆ ಭೇಟಿ ನೀಡಿದ ಸಾವಿರಾರು ಮಂದಿ ತಮ್ಮ ಆಪ್ತರ ಸಮಾಧಿಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು.

ಹಿಂದೂ ಮತ್ತು ಕ್ರಿಶ್ಚಿಯನ್ ಸ್ಮಶಾನಗಳು ಅಕ್ಕಪಕ್ಕದಲ್ಲಿರುವ ಚಾಂಪಿಯನ್‌ರೀಫ್ಸ್‌ನಲ್ಲಿ ಜಾತ್ರೆಯ ಸಡಗರ ಏರ್ಪಟ್ಟಿತ್ತು. ಮಂಗಳವಾರದಿಂದಲೇ ಮೃತರ ಕುಟುಂಬದವರು ಸ್ಮಶಾನಕ್ಕೆ ಭೇಟಿ ನೀಡಿ ಸಮಾಧಿಗಳನ್ನು ಸಿಂಗರಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಸಮಾಧಿಯ ಅಕ್ಕಪಕ್ಕ ಬೆಳೆದಿರುವ ಮುಳ್ಳು ಕಳ್ಳಿಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳೆದರು. ಮುಂಜಾನೆಯಿಂದಲೇ ಸ್ಮಶಾನಕ್ಕೆ ಭೇಟಿ ನೀಡಲು ಜನ ಪ್ರಾರಂಭಿಸಿದರು. ಸಂಜೆಯ ನಂತರ ಕಾಲಿಡಲೂ ಸಾಧ್ಯವಾಗದ ಪರಿಸ್ಥಿತಿ ಏರ್ಪಟ್ಟಿತು. ಕೆಜಿಎಫ್ ತ್ಯಜಿಸಿ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿರುವವರು ಸಹ ತಮ್ಮ ಕುಟುಂಬದ ಸಮೇತ ನಗರಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.

ಮೃತರಿಗೆ ಇಷ್ಟವಾದ ಆಹಾರ ಪದಾರ್ಥಗಳು, ಸುವಾಸನೆ ದ್ರವ್ಯ, ಮದ್ಯ, ಬೀಡಿ, ಸಿಗರೇಟು, ಎಲೆ ಅಡಿಕೆ, ಪಾನ್‌ಪರಾಗ್ ಮತ್ತಿತರ ವಸ್ತುಗಳನ್ನು ಸಮಾಧಿಯ ಮೇಲೆ ಇಟ್ಟು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೃತರ ಸಮಾಧಿಯನ್ನು ಕಂಡು ಕುಟುಂಬದವರು ರೋದಿಸುತ್ತಿದ್ದ ದೃಶ್ಯ ಸಹ ಕಂಡು ಬಂತು.

ಬ್ರಿಟಿಷರು ಚಿನ್ನದ ಗಣಿ ನಡೆಸುತ್ತಿದ್ದ ಕಾಲದಲ್ಲಿ ಅವರ ಸಂಪ್ರದಾಯದ ಪ್ರಕಾರ ಪ್ರಾರಂಭಿಸಿದ ಆತ್ಮಗಳಿಗೆ ಗೌರವ ಸಲ್ಲಿಸುವ `ಆಲ್ ಸೋಲ್ಸ್ ಡೇ~ ದಿನವನ್ನು ಕ್ರಮೇಣ ಅವರ ಬಳಿ ಕೆಲಸ ಮಾಡುತ್ತಿದ್ದ ಭಾರತೀಯರು ಸಹ ಅನುಸರಿಸತೊಡಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಸಂಪ್ರದಾಯ ಅಂದಿನಿಂದ ನಡೆದುಕೊಂಡು ಬಂದಿದೆ. ಹಿರಿಯರಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿ ಜನ ಮಾನಸದಲ್ಲಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT