ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

Last Updated 7 ಏಪ್ರಿಲ್ 2013, 9:36 IST
ಅಕ್ಷರ ಗಾತ್ರ

ಬಾಲಸೋರ್ (ಒಡಿಶಾ) (ಪಿಟಿಐ): ಪರಮಾಣು ಸಿಡಿ ತಲೆಗಳನ್ನು ಹೊತ್ತು ಸುಮಾರು 2000 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ತಲುಪಬಲ್ಲ ಸ್ವದೇಶಿ ನಿರ್ಮಿತ ಅಗ್ನಿ -2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಭಾನುವಾರ ಇಲ್ಲಿನ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಗ್ಗೆ 10.30ರ ಸುಮಾರಿಗೆ ಸಮಗ್ರ ಪರೀಕ್ಷಾ ವಲಯದ (ಐಟಿಆರ್) ಉಡಾವಣೆ ಸಂಕೀರ್ಣ 4ರಲ್ಲಿ ಸಂಚಾರಿ ಉಡಾವಣ ವಾಹಕದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

20 ಮೀಟರ್ ಉದ್ದ ಹಾಗೂ 17 ಟನ್ ತೂಕ ಇರುವ ಒಂದು ಸಾವಿರ ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತು 2000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ತಲುಪಬಲ್ಲದು ಎಂದು ಡಿಆರ್‌ಡಿಓ ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT