ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ-2 ಪ್ರೈಮ್ ಕ್ಷಿಪಣಿ: ಪರೀಕ್ಷಾರ್ಥ ಉಡಾವಣೆಗೆ ಸಿದ್ಧತೆ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ದೇಶದ ಮಹತ್ವಾಕಾಂಕ್ಷೆಯ ಅತ್ಯಾಧುನಿಕ `ಅಗ್ನಿ-2 ಪ್ರೈಮ್~ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮುಂದಿನ ತಿಂಗಳು ನಡೆಯಲಿದೆ.

ಮೂರು ಸಾವಿರ ಕಿ.ಮೀ ದೂರದ ಗುರಿುನ್ನು ನಿಖರವಾಗಿ ತಲುಪುವ ಸಾಮರ್ಥ್ಯವನ್ನು  ಕ್ಷಿಪಣಿ ಹೊಂದಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ವಿನ್ಯಾಸ, ಆಕಾರ, ಗಾತ್ರ ಸೇರಿದಂತೆ ಎಲ್ಲ ರೀತಿಯಲ್ಲೂ ಅಗ್ನಿ-2 ಕ್ಷಿಪಣಿಯನ್ನೇ ಹೋಲುವ ಈ ಕ್ಷಿಪಣಿ ಅದಕ್ಕಿಂತ ಒಂದು ಸಾವಿರ ಕಿ.ಮೀ ಹೆಚ್ಚಿನ ದೂರಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿದೆ.
 
ಅಗ್ನಿ-2ಗೆ ಹೋಲಿಸಿದರೆ ಅದಕ್ಕಿಂತಲೂ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಣುಶಕ್ತಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಭಾರ ಕಡಿಮೆ ಮತ್ತು ನಿಖರತೆ ಹೆಚ್ಚು.

ಸಮಗ್ರ ಕ್ಷಿಪಣಿ ಅಭಿವೃದ್ಧಿ ಯೋಜನೆ ಅಡಿ 1980ರಿಂದ `ಅಗ್ನಿ~ ಸರಣಿಯ ವಿವಿಧ ಸಾಮರ್ಥ್ಯದ ಕ್ಷಿಪಣಿಗಳನ್ನು ತಯಾರಿಸಲಾಗಿದೆ. ಈ ವರ್ಷಾಂತ್ಯದ ವೇಳೆಗೆ 5 ಸಾವಿರ ಕಿ.ಮೀ ದೂರ ಚಿಮ್ಮುವ `ಅಗ್ನಿ-5~ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಲು ರಕ್ಷಣಾ ಇಲಾಖೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT