ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅಣಕು ಪ್ರದರ್ಶನ ದುರಂತ: ಸಾಮಾನ್ಯ ಹಗ್ಗ ಬಳಕೆ ತಜ್ಞರ ಅಭಿಮತ

Last Updated 25 ಫೆಬ್ರುವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಶುಕ್ರವಾರ ಬಾಂಬೆ ರೆಯಾನ್ ಫ್ಯಾಷನ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ನಡೆಸಿದ ಅಗ್ನಿ ಅನಾಹುತ ರಕ್ಷಣಾ ಕಾರ್ಯಚರಣೆಯ ಅಣಕು ಪ್ರದರ್ಶನದಲ್ಲಿ ಹಳೆಯ ಹಗ್ಗವನ್ನು ಬಳಸಿರಬಹುದು ಎಂದು ಚಾರಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಇಂತಹ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮನಿಲಾ ರೋಪ್ ಎಂಬ ಹಗ್ಗವನ್ನು ಬಳಸುತ್ತಾರೆ. ಎರಡು ವರ್ಷ ಅದು ಬಾಳಿಕೆ ಬರುತ್ತದೆ ಹಾಗೂ ನಾವು ಬಳಸಿದಂತೆ ಹಗ್ಗದ ಸಾಮರ್ಥ್ಯ ಕಡಿಮೆಯಾಗುತ್ತದೆ. ಆರಂಭದಲ್ಲಿ ಸುಮಾರು 200 ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯ ಅದಕ್ಕಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮನಿಲಾ ರೋಪ್ ಹಗ್ಗಕ್ಕೆ ಬೆವರನ್ನು ಹೀರುವ ಸಾಮರ್ಥ್ಯವಿರುತ್ತದೆ. ಇದರಿಂದ ಕೈ ಜಾರುವುದಿಲ್ಲ ಎಂಬ ಕಾರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಇದೇ ಹಗ್ಗವನ್ನು ಬಳಸುತ್ತಾರೆ. 9 ಎಂಎಂ, 10 ಎಂಎಂ, 11 ಎಂಎಂ ಹೀಗೆ ಹಗ್ಗದ ಗುಣಮಟ್ಟವನ್ನು ಅಳೆಯಲಾಗುತ್ತದೆ. ಸಾಮರ್ಥ್ಯ ಕಳೆದುಕೊಂಡಿರುವ ಹಗ್ಗವನ್ನು ಬಳಸಿರುವುದರಿಂದ ಈ ಘಟನೆ ಜರುಗಿದೆ ಎಂದರು.

ಹೊಸ ಮನಿಲಾ ಹಗ್ಗವನ್ನು ಚಾಕುವಿನಿಂದ ಕತ್ತರಿಸುವುದಾದರೂ ತುಂಡಾಗಲು ಹತ್ತು ನಿಮಿಷ ಸಮಯ ಬೇಕು. ಸಮುದ್ರಗಳಲ್ಲಿ ಮೀನುಗಳನ್ನು ಹಿಡಿಯಲು ಇದೇ ನಾರಿನಿಂದ ಮಾಡಿದ ಬಲೆಗಳನ್ನು ಬಳಸುತ್ತಾರೆ. ಹಳೆಯ ಹಗ್ಗ ಬಳಸಿದ ಕಾರಣದಿಂದ ಈ ಘಟನೆ ನಡೆದಿರಬಹುದು ಎಂದು ಅವರು ಆರೋಪಿಸಿದರು.

ಹಲವು ವರ್ಷಗಳಿಂದ ಬಂಡೆಗಳನ್ನು ಹತ್ತುವ ಬಗ್ಗೆ ಸಾವಿರಾರು ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದೇವೆ. ಆದರೆ ಯಾವುದೇ ಸಣ್ಣ ಅನಾಹುತ ನಮ್ಮಲ್ಲಿ ಸಂಭವಿಸಿಲ್ಲ. ಲಾಗ್‌ಬುಕ್ ಅನ್ನು ನಮ್ಮಲ್ಲಿ ಇಟ್ಟುಕೊಂಡಿರಬೇಕು ಹಾಗೂ ಹಗ್ಗವನ್ನು ಬಳಸಿದ್ದರ ಬಗ್ಗೆ ಅದರಲ್ಲಿ ದಾಖಲಿಸಬೇಕು. ಇದರಿಂದ ಹಗ್ಗ ಎಷ್ಟು ಬಳಕೆಯಾಗಿದೆ ಎಂಬುದು ತಿಳಿಯುತ್ತದೆ ಎಂದು ಸಲಹೆ ನೀಡಿದರು.

ನಾವು ಬಂಡೆಗಳನ್ನು ಹತ್ತಲು ಸ್ಟ್ಯಾಟಿಕ್ಸ್ ರೋಪ್ ಹಾಗೂ ಡೈನಾಮಿಕ್ ಸ್ಟ್ಯಾಟಿಕ್ಸ್ ರೋಪ್ ಎಂಬ ಹಗ್ಗವನ್ನು ಬಳಸುತ್ತೇವೆ. ಆದರೆ ಭಾರ ಹೆಚ್ಚಾದಾಗ ಇವು ಜಗ್ಗುತ್ತವೆ. ಎಲ್ಲಾ ಹಗ್ಗಗಳು ಅಮೇರಿಕಾ ಹಾಗೂ ಯೂರೋಪ್‌ನಿಂದ ಆಮದಾಗುತ್ತವೆ ಎಂದರು.

ಮೊದಲಿನಿಂದಲೂ ಕಾರ್ಯಾಚರಣೆಗೆ ಇದೇ ಮಾದರಿಯ ಹಗ್ಗಗಳನ್ನು ಬಳಸುತ್ತಿದ್ದೇವೆ. ಆದರೆ ಇಂತಹ ಘಟನೆ ಸಂಭವಿಸಿರುವುದು ಇದೇ ಮೊದಲು. ಅಗ್ನಿ ಅನಾಹುತ ಸಂಭವಿಸಿದಾಗ ನಾವು ಕಾರ್ಯಾಚರಣೆಗೆ ಬಳಸುವ ಹಗ್ಗಕ್ಕೆ ಬೆಂಕಿ ಹತ್ತಿಕೊಳ್ಳುವುದಿಲ್ಲ. ಆದರೆ ಸ್ಟ್ಯಾಟಿಕ್ಸ್ ರೋಪ್ ಅಥವಾ ನೈಲಾನ್ ಹಗ್ಗಗಳನ್ನು ಬಳಸುವುದರಿಂದ ಅವು ಬೆಂಕಿಯಿಂದ ಹಾಳಾಗುತ್ತವೆ. ಇದೇ ಕಾರಣದಿಂದ ಮನಿಲಾ ರೋಪ್ ಬಳಸುತ್ತೇವೆ~ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT