ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ–1 ಕ್ಷಿಪಣಿ ಉಡಾವಣೆ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಬಾಲಸೋರ್‌, ಒಡಿಶಾ (ಪಿಟಿಐ): ದೇಶಿ ನಿರ್ಮಿತ ಅಗ್ನಿ–1 ಖಂಡಾತರ ಕ್ಷಿಪಣಿಯನ್ನು ಸೋಮವಾರ ಒಡಿಶಾ ಕರಾವಳಿಯಲ್ಲಿ  ಯಶಸ್ವಿಯಾಗಿ  ಉಡಾವಣೆ ಮಾಡಲಾಯಿತು.

ಪರಮಾಣು ಸಾಮರ್ಥ್ಯದ ಅಗ್ನಿ–1 ಕ್ಷಿಪಣಿಯು 9 ನಿಮಿಷ 36 ಸೆಕೆಂಡ್‌ಗಳಲ್ಲಿ ಸುಮಾರು 700 ಕಿ.ಮೀ. ದೂರದಷ್ಟು ಗುರಿಯನ್ನು ಕ್ರಮಿಸಬಲ್ಲ ಅತ್ಯಾಧುನಿಕ ಕ್ಷಿಪಣಿಯಾಗಿದೆ.

ಭುವನೇಶ್ವರದಿಂದ 150 ಕಿ.ಮೀ. ದೂರದಲ್ಲಿರುವ ಅಬ್ದುಲ್‌ ಕಲಾಂ  ದ್ವೀಪದಲ್ಲಿನ (ವೀಲರ್‌ ದ್ವೀಪ) ಆಂತರಿಕ ಪರೀಕ್ಷಾ ಶ್ರೇಣಿಯಲ್ಲಿರುವ ಉಡಾವಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ 9.15ಕ್ಕೆ ಉಡಾವಣೆ ನಡೆಸಲಾಯಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT