ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಸ್ಥಾನ ಹಂಚಿಕೊಂಡ ರೀಶಾ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ರೀಶಾ ಶೆಣೈ, ಚೆಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ 14 ವರ್ಷದೊಳಗಿನವರ ಚೆಸ್ ಟೂರ್ನಿಯ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ನಂತರ ಇತರ ನಾಲ್ವರು ಆಟಗಾರ್ತಿಯರ ಜತೆ ತಲಾ 2 ಪಾಯಿಂಟ್ಸ್ ಸಂಗ್ರಹಿಸಿ ಮುನ್ನಡೆ ಹಂಚಿಕೊಂಡಿದ್ದಾರೆ.

ನಗರದ ಡೆರಿಕ್ಸ್ ಚೆಸ್ ಸ್ಕೂಲ್ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸೋಮವಾರ, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕ ಅರ್ಜುನ್ ಅಡಪ್ಪ, ಅನಿಶ್ಚರಿತ್, ಆದಿತ್ಯ ಶೆಟ್ಟಿ, ಅಖಿಲ್ ಆರ್.ಎಂ. ಸೇರಿದಂತೆ ಒಟ್ಟು 12 ಮಂದಿ ಮುನ್ನಡೆ ಸಾಧಿಸಿದ್ದಾರೆ.

10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 9 ಮಂದಿ ಮುನ್ನಡೆ ಸಾಧಿಸಿದ್ದು, ರಾಜ್ಯದ ಅನುತ್ತಮ ಎ., ಚೈತನ್ಯಶಾಮ್ ಒಳಗೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ಇಶಾನಿ, ರೈ, ಮಾನಸಾ ಕಾರಂತ್, ಕ್ಷಮಾ ಆಚಾರ್ಯ ಮುನ್ನಡೆ ಸಾಧಿಸಿದವರಲ್ಲಿ ಒಳಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT