ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜೆರ್ ತುಳು ನಾಟಕ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಾಸ್ಯ ಹಾಗೂ ಅಧ್ಯಾತ್ಮದ ಕಥಾ ವಸ್ತುವನ್ನು ಹೊಂದಿರುವ ತುಳು ನಾಟಕ `ಅಜ್ಜೆರ್~ ಅ. 13 ರಂದು ಪ್ರದರ್ಶನಗೊಳ್ಳಲಿದೆ. `ಒರಿಯರ್ದೋರ್ ಅಸಲ್~ ಸಿನಿಮಾ ನಿರ್ಮಿಸಿದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಬೆಂಗಳೂರಿನ ಸೃಷ್ಟಿ ಎಂಟರ್‌ಟೇನ್‌ಮೆಂಟ್‌ನವರು ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ. ಕಲಾಸಂಗಮದ ರಂಗ ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ.

ಬೇರೆ ಭಾಷೆಗಳ ಪ್ರಭಾವದಲ್ಲಿ ಮಂಕಾಗಿರುವ ತುಳು ಭಾಷೆಯನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿರುವ ದಕ್ಷಿಣ ಕನ್ನಡದ ಪ್ರಸಿದ್ಧ ನಾಟಕಕಾರ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನಾಟಕವನ್ನು ವಿಶಿಷ್ಟ ರೀತಿಯಲ್ಲಿ ನಿರ್ದೇಶಿಸಿದ್ದಾರೆ.

`ಒರಿಯರ್ದೋರ್ ಅಸಲ್~ ಅವರ ಮೊದಲ ನಾಟಕ. ಈ ನಾಟಕವನ್ನೇ ಅವರು ಸಿನಿಮಾ ಮಾಡಿದರು. ಈ ಸಿನಿಮಾ ಮಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ 25 ವಾರ (2011ರಲ್ಲಿ) ಪ್ರದರ್ಶನಗೊಂಡಿದೆ.

ಅವರು ಬಳಿಕ ಸಾಕಷ್ಟು ನಾಟಕಗಳನ್ನು ನಿರ್ದೇಶಿಸಿದ್ದಾರೆ. ತಮಾಷೆಯ ಈ ನಾಟಕವೂ ಸೇರಿದಂತೆ ಅವರ ನಾಟಕಗಳು ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು, ಜನಮೆಚ್ಚುಗೆಯನ್ನು ಪಡೆದಿವೆ.
 
ಇದಲ್ಲದೆ ತುಳುವರು ಬಹುಸಂಖ್ಯೆಯಲ್ಲಿರುವ ಮುಂಬೈ ಮತ್ತು ಗಲ್ಫ್‌ನಲ್ಲೂ ಈ ನಾಟಕ ಪ್ರದರ್ಶನ ಕಂಡಿದೆ. ನಾಟಕಕ್ಕೆ ಎ.ಕೆ. ವಿಜಯ್ (ಕೋಕಿಲಾ) ಸಂಗೀತ ನೀಡಿದ್ದಾರೆ. ನಾಟಕದ ಪ್ರದರ್ಶನಕ್ಕೂ ಮುನ್ನ ಕಲಾಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಸಂಘಟಕ ಮಂಜು ಅಡಪ ತಿಳಿಸಿದ್ದಾರೆ. ಸಂಪರ್ಕ: ಮಂಜು ಅಡಪ: 9731818618
ಸ್ಥಳ: ಟೌನ್‌ಹಾಲ್, ಜೆ.ಸಿ. ರಸ್ತೆ. ಸಮಯ: ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT