ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕೊಳೆ ತಡೆಗೆ ಸುಧಾರಿತ ಸ್ಪ್ರೇಯರ್

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಅಡಿಕೆ ತೋಟಗಳಲ್ಲಿ ಮಳೆಗಾಲದೊಂದಿಗೆ ಕೊಳೆರೋಗವೂ ಕಾಲಿಡುತ್ತದೆ. ಮಳೆ ಹೊಯ್ಯುವ ಸಮಯದಲ್ಲಿ ಅಡಿಕೆ ಮರ ಏರಿ ಔಷಧಿ ಸಿಂಪರಣೆ ಮಾಡುವುದೇ ದೊಡ್ಡ ಸಮಸ್ಯೆ. ಈ ಕಷ್ಟ ಕಡಿಮೆ ಮಾಡಲು ಕೃಷಿ ಯಂತ್ರೋಪಕರಣ ಮಳಿಗೆ ಅಗ್ರಿಮಾರ್ಟ್ ಈಗ `ಅಗ್ರಿಮೇಟ್ 768~ ಎಂಬ ಸುಧಾರಿತ ಸ್ಪ್ರೇಯರ್ ಪರಿಚಯಿಸಿದೆ.

ಈ ಹಿಂದೆ ಇದ್ದಂತೆ ಪಂಪ್‌ಗೆ ಹವಾ ಹಾಕುವ ಕಷ್ಟ ಇದಕ್ಕಿಲ್ಲ.  ಏಕೆಂದರೆ ಇದು ಪೆಟ್ರೋಲ್ ಚಾಲಿತ ಯಂತ್ರ. ಔಷಧಿ ಸಿಂಪಡಿಸುವ ವ್ಯಕ್ತಿ ಯಂತ್ರವನ್ನು ಚಾಲನೆ ಮಾಡಿ ತನ್ನ ಕಾರ್ಯವನ್ನು ಒಬ್ಬನೇ ಮುಗಿಸಬಹುದು. ಹವಾ ಹಾಕುವ ಕೂಲಿಯೂ ಉಳಿಯುತ್ತದೆ. ಕೆಲಸವೂ ಬೇಗ ಆಗುತ್ತದೆ. ಅಲ್ಲದೆ ಉಳಿದ ವೇಳೆ ಇದನ್ನು ಕೊಟ್ಟಿಗೆ, ದನ, ವಾಹನ, ಕಲ್ಲಿನ ನೆಲ ತೊಳೆಯಲು ಕೂಡ ಬಳಸಬಹುದು.

20 ಅಡಿ ಎತ್ತರ ಚಿಮ್ಮಿಸುವ ನಾಝಲ್ ಈ ಸ್ಪ್ರೇಯರ್‌ಗೆ ಇದೆ. ಇದರಿಂದ ಕೂಲಿಯಾಳು ಸಿಗದಿದ್ದರೆ ತೋಟದ ಯಜಮಾನನೇ ಏಣಿ ಮೇಲೆ ನಿಂತು ಅಡಿಕೆ ಕೊನೆಗೆ ಔಷಧಿ ಸಿಂಪಡಿಸಬಹುದು.

ಔಷಧಿಯ ಚೆಲ್ಲುವುದಿಲ್ಲ, ವ್ಯರ್ಥವಾಗುವುದಿಲ್ಲ. ಈಗಿನ ಕೂಲಿ ದರಕ್ಕೆ ಹೋಲಿಸಿದರೆ ಇದು ರೈತ ಸ್ನೇಹಿ ಯಂತ್ರ ಎನ್ನುತ್ತದೆ ಅಗ್ರಿಮಾರ್ಟ್. ಇದಲ್ಲದೇ ಅನಾನಸ್, ತರಕಾರಿ, ಹಣ್ಣಿನ ತೋಟಗಳಲ್ಲಿ ಔಷಧಿ ಹೊಡೆಯುವ ಆಧುನಿಕ ಸ್ಪ್ರೇಯರ್‌ಗಳನ್ನೂ ಅಗ್ರಿಮಾರ್ಟ್ ಪರಿಚಯಿಸಿದೆ. ಮಾಹಿತಿಗೆ: 94805 19859.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT