ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬೆಳೆ ರೈತರಿಗೆ ಆತಂಕ ಬೇಡ: ಹೆಗ್ಡೆ

Last Updated 1 ಜನವರಿ 2014, 9:47 IST
ಅಕ್ಷರ ಗಾತ್ರ

ಮೂಡಿಗೆರೆ: ಅಡಿಕೆ ಬೆಳೆ ನಿಷೇಧಿ­ಸುವಂತೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರ­ವಾಗಲೀ ಯಾವುದೇ ಪ್ರಮಾಣ ಪತ್ರ­ಗಳನ್ನು ನೀಡಿಲ್ಲ. ಅಡಿಕೆ ಬೆಳೆ ನಿಷೇಧಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಇದರ ಬಗ್ಗೆ ರೈತರಿಗೆ ಆತಂಕ ಬೇಡ ಎಂದು ಸಂಸದ ಜಯ­ಪ್ರಕಾಶ್‌ ಹೆಗ್ಡೆ ತಿಳಿಸಿದರು.

ಪಟ್ಟಣ­ದಲ್ಲಿ ಲ್ಯಾಂಪ್ಸ್‌ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟ­ನೆಯ ನಂತರ ಸುದ್ದಿಗಾರ­ರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆ ವಿಚಾರವಾಗಿ ಸುಪ್ರೀಂ ಕೋರ್ಟ್‌, 7 ಜನರ ಸಮಿತಿ­ಯನ್ನು ನೇಮಕಗೊಳಿಸಿ, ಆ ಸಮಿತಿಯ ವರದಿ ಅನ್ವಯ ಚರ್ಚೆಗಳು ನಡೆಯು­ತ್ತಿದ್ದು, ಈ ಚರ್ಚೆಗೆ ಕಳೆದ ಅವಧಿಯ ರಾಜ್ಯ ಸರ್ಕಾರ ನೀಡಿರುವ ಮಾಹಿತಿ ವ್ಯತ್ಯಾಸ ಕಾರಣವಾಗಿದೆ. ಈ  ವಿಚಾರ­ವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜೊತೆಯಲ್ಲಿ ಎರೆ­ಡೆರಡು ಬಾರಿ ಸಭೆ ನಡೆಸಲಾಗಿದ್ದು, ಧನಾ­ತ್ಮಕ ನಿರ್ಧಾರಕ್ಕೆ ಪೂರಕವಾದ ಕಾರ್ಯ­ವೆಸಗಲಾಗುವುದು, ಆದು­ದ­ರಿಂದ ಅಡಿಕೆ ಬೆಳೆ ವಿಚಾರವಾಗಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಠಿಸ­ಬಾರದು ಎಂದರು.

ಯಾವುದೇ ಕಾನೂ­ನನ್ನು ರಾಜ್ಯ ಸರ್ಕಾರದ ಅನುಮತಿ­ಯಿಲ್ಲದೇ ಕೇಂದ್ರ ಸರ್ಕಾರ ಏಕಾಏಕಿ ರಚನೆ ಮಾಡಿ ಜಾರಿಗೆ ತರಲು ಸಾಧ್ಯವಿಲ್ಲದ್ದರಿಂದ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿರುವ ಒತ್ತುವರಿ ಸಮಸ್ಯೆ, ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್‌ ವರದಿ ಯೋಜನೆಗಳೆಲ್ಲದಕ್ಕೂ ಹಿಂದಿನ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿ­ಸಿದೆ ಮತ್ತು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ದಾಖಲೆಗಳಿವೆ ಎಂದು ಆರೋ­ಪಿಸಿದರು.

ಇಂತಹ ಯೋಜನೆಗಳ ಬಗ್ಗೆ ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲಹರಣ ಮಾಡುವ ಬದಲು, ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇಧ ಮರೆತು ಹೋರಾಟ ನಡೆಸಬೇಕು ಎಂದರು. ಮಲೆನಾಡಿನಲ್ಲಿ ನಿಷೇಧಿಸ­ಲಾಗಿದ್ದ ಟಿಂಬರ್‌ ವ್ಯಾಪಾರಕ್ಕೆ ಹೊಸ ನೀತಿಯನ್ನು ಜಾರಿಗೆ ತರಲಾಗಿದ್ದು, ಮರ ಕಡಿತಲೆಗೆ ಹೊಸ ಆದೇಶ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT