ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಸುಲಿಯುವ ಯಂತ್ರದ ಪ್ರಾತ್ಯಕ್ಷಿಕೆ

Last Updated 18 ಜನವರಿ 2011, 20:15 IST
ಅಕ್ಷರ ಗಾತ್ರ

ಕಲ್ಕೆರೆ(ಬಾಳೆಹೊನ್ನೂರು): ವಿನೂತನ ಮಾದರಿಯ ಅಡಿಕೆ ಸುಲಿಯುವ ಯಂತ್ರದ ಪ್ರಾತ್ಯಕ್ಷಿಕೆ ಕೊಪ್ಪ ತಾಲ್ಲೂಕು ಕಲ್ಕೆರೆ ದೇವಿಕೊಪ್ಪದ ಕೃಷಿಕ ಟಿ.ಎಂ.ನಟೇಶ್ ಅವರ ಮನೆಯಲ್ಲಿ ಮಂಗಳವಾರ ನಡೆಯಿತು.

ಕೊಪ್ಪದ ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಎಚ್.ಎನ್.ಕೃಷ್ಣಶಾಸ್ತ್ರಿ, ಸಂಘದ ಮೂಲಕ ಯಂತ್ರವನ್ನು ಜಿಲ್ಲೆಯ ಮಾರುಕಟ್ಟೆಗೆ ಬಿಡುಗಡೆ ಮಾಡುಲಾಗುತ್ತಿದ್ದು, ಶೀಘ್ರದಲ್ಲಿಯೇ ಎಲ್ಲಾ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು ಎಂದರು.

ಸುಧಾರಿತ ಹಾಗೂ ಉತ್ಕೃಷ್ಟ ದರ್ಜೆಯ 1, 2, 4, 6 ಮತ್ತು 8 ಚೈನಿನ ಯಂತ್ರಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ವಿ 1 ಹಾಗೂ ವಿ 2 ಮಾದರಿಯ ಯಂತ್ರಗಳನ್ನು ಸಣ್ಣ-ಮಧ್ಯಮ ವರ್ಗದ ಬೆಳೆಗಾರರಿಗೆ ಅನುಕೂಲವಾಗುವಂತೆ ತಯಾರಿಸಲಾಗಿದೆ.

ಗಂಟೆಗೆ 35ರಿಂದ 50 ಕೆ.ಜಿ ಅಡಿಕೆ ಸಂಸ್ಕರಿಸಬಹುದಾಗಿದೆ.  ಯಂತ್ರದ ಅಡಿಕೆ ಸುಲಿಯುವಾಗಿನ ಹಾನಿ ಪ್ರಮಾಣ ಶೇ. 95ರಷ್ಟು ಕಡಿಮೆಯಿದ್ದು, ಸುಲಲಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಯಂತ್ರ ತಯಾರಿಸಿರುವ ಕುಂಟವಳ್ಳಿಯ ಖಾಸಗಿ ಸಂಸ್ಥೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT