ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಹಾಳೆ, ಕಾಗದ ತಟ್ಟೆ, ಲೋಟ ತಯಾರಿ ತರಬೇತಿ

Last Updated 6 ಜನವರಿ 2014, 6:38 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರಿನಲ್ಲಿ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಯು ನಿರುದ್ಯೋಗಿ ಅಭ್ಯರ್ಥಿಗಳಿಗೆ ಅಡಿಕೆ ಹಾಳೆ ಹಾಗೂ ಕಾಗದದಿಂದ ಲೋಟ ಹಾಗೂ ತಟ್ಟೆ ತಯಾರಿಕೆ ಕುರಿತ ತರಬೇತಿ ನೀಡಲಿದೆ.

ರಾಜಾಜಿನಗರದಲ್ಲಿರುವ ಸಂಸ್ಥೆಯ ಕೇಂದ್ರದಲ್ಲಿ ಜ. 27 ರಿಂದ 31ರವರೆಗೆ ಒಟ್ಟು 5 ದಿನಗಳ ಅವಧಿಯ ತರಬೇತಿ ನೀಡಲಿದೆ. ತಟ್ಟೆ ಹಾಗೂ ಲೋಟ ತಯಾರಿಕೆಗೆ ಬಳಸಬೇಕಾದ ಕಚ್ಚಾ ವಸ್ತುಗಳು, ಗುಣಮಟ್ಟ ನಿರ್ವಹಣೆ ಸೇರಿದಂತೆ ಇತರೇ ವಿಷಯ ಕುರಿತು ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನದ ಮೂಲಕ ತರಬೇತಿ ನೀಡಲಾಗುತ್ತದೆ.

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ತಂದೆ ಅಥವಾ ಗಂಡನ ಹೆಸರು, ವೈವಾಹಿಕ ಸ್ಥಿತಿ, ಅನುಭವ, ದೂರವಾಣಿ ಸಂಖ್ಯೆ ಸೇರಿದಂತೆ ಇತರೇ ವಿವರ ಬರೆದ ಅರ್ಜಿಯನ್ನು ನಿರ್ದೇಶಕರು, ಎಂಎಸ್ಎಂಇ  ಡಿಐ, ರಾಜಾಜಿನಗರ, ಬೆಂಗಳೂರು– ಇಲ್ಲಿಗೆ ಕಳುಹಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ 080- 23151581 ಅಥವಾ ಮೊಬೈಲ್ 89718 28533 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT