ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ಕೊಳೆರೋಗ: ರೈತರು ಕಂಗಾಲು

Last Updated 4 ಆಗಸ್ಟ್ 2011, 8:40 IST
ಅಕ್ಷರ ಗಾತ್ರ

ಸಿದ್ದಾಪುರ:  ತಾಲ್ಲೂಕಿನ ಹಾರ್ಸಿಕಟ್ಟ ಸಮೀಪದ ಊರತೋಟ ಎಂಬ ಹಳ್ಳಿಯಲ್ಲಿ ಅಡಿಕೆಗೆ ಭಾರಿ ಪ್ರಮಾಣದಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ರೈತರನ್ನು ಕಂಗಾಲು ಮಾಡಿದೆ.

ಈ ಊರಿನಲ್ಲಿ ಸುಮಾರು 10ಕ್ಕಿಂತ ಹೆಚ್ಚು ರೈತರಿದ್ದು, ಎಲ್ಲರೂ ಅಡಿಕೆ ಬೆಳೆಯನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಒಟ್ಟು ಸುಮಾರು 12 ಎಕರೆಯಷ್ಟು ಅಡಿಕೆ ತೋಟ ಈ ಊರಿನಲ್ಲಿದೆ. ಇಲ್ಲಿನ ಬಹುತೇಕ ರೈತರು ಸಣ್ಣ ಹಿಡುವಳಿದಾರರು. 

ಈಗ ಪ್ರತಿದಿನವೂ ಪ್ರತಿಯೊಬ್ಬ ಬೆಳೆಗಾರರ ತೋಟದಲ್ಲಿಯೂ ಚೀಲಗಟ್ಟಲೆ ಅಡಿಕೆ ಕೊಳೆರೋಗದಿಂದ ಉದುರುತ್ತಿವೆ.

ಮಳೆಗಾಲದ ಪ್ರಾರಂಭದಲ್ಲಿಯೆ ಅಡಿಕೆಗೆ `ಮದ್ದು~ (ಬೋರ್ಡೋ ಮಿಶ್ರಣ ಅಥವಾ ಬಯೋಫೈಟ್) ಸಿಂಪರಣೆಯನ್ನು ಇವರು ಮಾಡಿದ್ದಾರೆ. ಕೆಲವರು ಎರಡನೇ ಸಾರಿಯೂ ಅಡಿಕೆ ಬೆಳೆಗೆ ಮದ್ದು ಹೊಡೆಸುತ್ತಿದ್ದಾರೆ.

`ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮತ್ತು ಈಚೆಗೆ ಕಾಣಿಸಿಕೊಂಡಿದ್ದ ಬಿಸಿಲು ಮತ್ತು ಮಳೆಯ ವಾತಾವರಣದ ಕಾರಣದಿಂದ ಕೊಳೆರೋಗ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ~ ಎನ್ನುತ್ತಾರೆ  ಸ್ಥಳೀಯರಾದ ಸತ್ಯನಾರಾಯಣ ಹೆಗಡೆ, ಭಾಸ್ಕರ ಹೆಗಡೆ, ರಾಘವ ಹೆಗಡೆ, ಶ್ರೀಪತಿ ಹೆಗಡೆ, ಮಂಜುನಾಥ ಹೆಗಡೆ ಮತ್ತಿತರರು ರೈತರು.

ಈ ಕೊಳೆರೋಗದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಯನ್ನು ಸರ್ಕಾರ ಮಾಡಬೇಕು.
ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಊರತೋಟದ ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT