ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಕು ಚುನಾವಣೆ: ಒಬಾಮಗೆ ಗೆಲುವು!

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕ ಅಧ್ಯಕ್ಷ ಗಾದಿಗೆ ನಡೆದ `ಅಣಕು ಚುನಾವಣೆ~ ಫಲಿತಾಂಶದಲ್ಲಿ ಬರಾಕ್ ಒಬಾಮ ಮರು ಆಯ್ಕೆಯಾಗಿದ್ದಾರೆ.  ಮಕ್ಕಳ ಪುಸ್ತಕ ಮತ್ತು ನಿಯತಕಾಲಿಕೆ ಪ್ರಕಾಶನ ಸಂಸ್ಥೆಯೊಂದು ನಡೆಸಿರುವ ಈ ಅಣಕು `ಚುನಾವಣೆ~ಯಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದ್ದಾರೆ. 

ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಒಬಾಮ ಶೇ 51ರಷ್ಟು ಮತ, ರಿಪಬ್ಲಿಕನ್ ಪಕ್ಷದ ಮಿಟ್ ರೋಮ್ನಿ ಶೇ 45ರಷ್ಟು ಮತ ಪಡೆದಿದ್ದಾರೆ. 

18 ವರ್ಷದೊಳಗಿನ ಸುಮಾರು 25 ಸಾವಿರ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಗಳಿಗೆ ಸಂಬಂಧಪಟ್ಟ ಈ `ಅಣಕು ಚುನಾವಣೆ~ಯನ್ನು 1940ರಿಂದ ನಡೆಸಲಾಗುತ್ತಿದೆ.

ಮುಂದುವರಿದ ವಾಗ್ದಾಳಿ: ಎರಡನೇ ಸುತ್ತಿನ ಚರ್ಚೆ ಮುಗಿದ ನಂತರವೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಎದುರಾಳಿ ರಿಪಬ್ಲಿಕ್ ಪಕ್ಷದ ಮಿಟ್ ರೋಮ್ನಿ ಪರಸ್ಪರ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT