ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಕು ನ್ಯಾಯಾಲಯ ಸ್ಪರ್ಧೆ

Last Updated 13 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ಮೈಸೂರು: ಸರಸ್ವತಿಪುರಂನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಭಾನು ವಾರ ಮುಕ್ತಾಯವಾದ ಕಾರ್ಪೋ ರೇಟ್ ಕಾನೂನು ಅಣಕು ನ್ಯಾಯಾ ಲಯ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಹಾಗೂ ನ್ಯಾಷನಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.

ಎರಡು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧ ಕಾಲೇಜು ಗಳ 44 ತಂಡಗಳು ಭಾಗವಹಿಸಿದ್ದವು. ಕ್ರೈಸ್ಟ್ ಕಾನೂನು ಕಾಲೇಜು ಮತ್ತು ನ್ಯಾಷನಲ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ವಾದ ಮಂಡನೆ ಮೂಲಕ ನ್ಯಾಯಮೂರ್ತಿ ಗಳು ಹಾಗೂ ಸಭಿಕರ  ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್, `ಕಾನೂನು ವಿದ್ಯಾರ್ಥಿಗಳಿಗೆ ಹಿಂದೆಂದಿಗಿಂತಲೂ ಈಗ ಉತ್ತಮ ಅವಕಾಶಗಳು ಲಭ್ಯ ಇವೆ. ಅದರಲ್ಲೂ ಕಾರ್ಪೋರೇಟ್ ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೂ ಸಿದ್ಧರಾಗಬೇಕು. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉತ್ತಮ ಗುರಿ ತಲುಪಬೇಕು~ ಎಂದು ಹೇಳಿದರು.

`ಯಾವುದೇ ಪ್ರಕರಣವನ್ನು ಆದಷ್ಟು ಸರಳವಾಗಿ ವಾದಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಇದರಿಂದ ನ್ಯಾಯಾಧೀಶರಿಗೆ ನ್ಯಾಯ ತೀರ್ಮಾನ ಮಾಡಲು ಸುಲಭವಾಗುತ್ತದೆ. ಜಗತ್ತಿನಲ್ಲಿ ವೈದ್ಯಕೀಯ ಮತ್ತು ವಕೀಲ ವೃತ್ತಿಗಳು ಶ್ರೇಷ್ಠವಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಎರಡೂ ವೃತ್ತಿಗಳೂ ವ್ಯಾವಹಾರಿಕವಾಗುತ್ತಿವೆ~ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಕ್ರೈಸ್ಟ್ ಕಾನೂನು ಕಾಲೇಜಿನ ಅಜಯ್‌ಕುಮಾರ್, ನ್ಯಾಷನಲ್ ಕಾಲೇಜಿನ ಶ್ರೇಯಾ ಹಾಗೂ ಲಖ್ನೋದ ಕಿಶನ್ ತಮ್ಮ ಅನುಭವ ಹಂಚಿಕೊಂಡರು.

ಪದಮ್‌ಚಂದ್ ಖಿಂಚಾ, ಪ್ರವೀಣ್ ಕಿಶೋರ್ ಪ್ರಸಾದ್, ಪ್ರೊ.ಎ.ವೆಂಕಟ ರಾವ್, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಸುರೇಶ್, ಡಾ.ಎಸ್.ರವಿಚಂದ್ರನ್, ಪಿ.ಶಿವಾನಂದ ಭಾರತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT