ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣೆಕಟ್ಟುಗಳಿಂದ ತಾಪಮಾನ ಏರಿಕೆ

Last Updated 8 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಟೊರೆಂಟೊ (ಐಎಎನ್‌ಎಸ್): ಜಾಗತಿಕ ತಾಪಮಾನ ಏರಿಕೆಗೆ ಅಣೆಕಟ್ಟುಗಳ ಕೊಡುಗೆ ಅಪಾರವಾಗಿದ್ದು, ಅವುಗಳು `ಅಪರಾಧಿ~ಯಂತೆ ಕಾಣುತ್ತವೆ ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.

ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಏರಿಕೆ - ಇಳಿಕೆಯಾಗುವ ಮೂಲಕ ಉತ್ಪತ್ತಿಯಾಗುವ `ಹಸಿರು ಮನೆ ಅನಿಲದ ಪರಿಣಾಮ~ದಿಂದಾಗಿ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೆನಡಾದ ವ್ಯಾಂಕೊವರ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ (ವಿಎಸ್‌ಯು) ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಬ್ರಿಗೆಟ್ ಡೀಮರ್ ಈ ಸಂಶೋಧನೆ ನಡೆಸಿದ್ದಾರೆ.

ಕ್ಲಾರ್ಕ್ ಪ್ರಾಂತ್ಯದ ಲಕಮಾಸ್ ಸರೋವರಕ್ಕೆ ನಿರ್ಮಿಸಲಾದ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿದಾಗ ವಾತಾವರಣಕ್ಕೆ ಬಿಡುಗಡೆಯಾದ ಮಿಥೇನ್ ಅನಿಲದ ಪ್ರಮಾಣವನ್ನು ದಾಖಲಿಸಿದ್ದಾರೆ. ಆ ಪ್ರಕಾರ 20 ಪಟ್ಟು ಅಧಿಕ ಪ್ರಮಾಣದಲ್ಲಿ ಮಿಥೇನ್ ಅನಿಲ ವಾತಾವರಣಕ್ಕೆ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT