ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಿಗೇರಿ: ಮತ್ತೆ 300 ತಲೆಬುರುಡೆ ಪತ್ತೆ!

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅಣ್ಣಿಗೇರಿ (ಧಾರವಾಡ ಜಿಲ್ಲೆ): ಕಳೆದ ಆಗಸ್ಟ್ 28 ರಂದು ಇಲ್ಲಿ ಪತ್ತೆಯಾದ ಮಾನವ ತಲೆಬುರುಡೆಗಳ ರಹಸ್ಯ ಭೇದಿಸಲು ರಾಜ್ಯ ಪ್ರಾಚ್ಯವಸ್ತು ಹಾಗೂ ಸಂಗ್ರಹಾಲಯಗಳ ನಿರ್ದೇಶನಾಲಯ ಜನವರಿ 12 ರಿಂದ ಕೈಗೊಂಡ ಉತ್ಖನನ ಕಾರ್ಯ ಅಂತಿಮ ಹಂತ ತಲುಪಿದ್ದು, ಪುನಃ 300ಕ್ಕೂ ಹೆಚ್ಚು ತಲೆಬುರುಡೆಗಳು ಸಿಕ್ಕಿದ್ದು, ಕುತೂಹಲ ಮೂಡಿಸಿದೆ.

ಈ ವಾರಾಂತ್ಯದ ವೇಳೆಗೆ ಉತ್ಕನನ ಪೂರ್ಣಗೊಳ್ಳಲಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಆಗಸ್ಟ್ 28 ರಂದು 20ಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆಯಾಗಿದ್ದವು.

ಆಗಸ್ಟ್ 31ರಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ತಲೆಬುರುಡೆ ಇದ್ದ ಸ್ಥಳದಲ್ಲಿ ಜೆಸಿಬಿ ಯಂತ್ರದಿಂದ ಮಣ್ಣನ್ನು ತೆಗೆಸಿದಾಗ ನೂರಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆಯಾದವು. ಈಗ ಅದರ ಪಕ್ಕದಲ್ಲಿಯೇ ಉತ್ಖನನದಿಂದ ಮತ್ತೆ ಮೂರು ನೂರಕ್ಕೂ ಹೆಚ್ಚು ತಲೆಬುರುಡೆಗಳು ಸಿಕ್ಕಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT