ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ: ಕರಾರು ಅವಧಿ ವಿಸ್ತರಣೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪರಮಾಣು ಅಸ್ತ್ರಗಳ ಅಪಾಯದ ಭೀತಿ ತಗ್ಗಿಸುವ ನಿಟ್ಟಿನಲ್ಲಿ  ಈ ಹಿಂದೆ ಮಾಡಿಕೊಳ್ಳಲಾಗಿದ್ದ ಮಹತ್ವದ ಕರಾರಿನ ಅವಧಿಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲು ಭಾರತ ಮತ್ತು ಪಾಕಿಸ್ತಾನ ಸಮ್ಮತಿಸಿವೆ.

ಇಸ್ಲಾಮಾಬಾದ್‌ನಲ್ಲಿ ಕಳೆದ ವರ್ಷದ ಡಿಸೆಂಬರ್ 27ರಂದು ನಡೆದಿದ್ದ `ದ್ವಿಪಕ್ಷೀಯ ಅಣ್ವಸ್ತ್ರ ವಿಶ್ವಾಸವರ್ಧನಾ ಕ್ರಮ~ದ ತಜ್ಞರ ಹಂತದ ಮಾತುಕತೆಯಲ್ಲಿ ಒಪ್ಪಿಕೊಂಡಂತೆ ಈ ಕರಾರಿನ ಅವಧಿ ವಿಸ್ತರಿಸಲಾಗಿದೆ.

ಈ ಕರಾರು ಮಂಗಳವಾರದಿಂದ ಜಾರಿಯಲ್ಲಿ ಬರುತ್ತಿದ್ದು ಮುಂದಿನ ಐದು ವರ್ಷಗಳ ಕಾಲ ಚಾಲ್ತಿಯಲ್ಲಿ ಇರುತ್ತದೆ. 2007ರ ಫೆಬ್ರುವರಿ 21ರಂದು ಮೊದಲ ಬಾರಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಎದುರಾಗುವ ಅವಘಡಗಳ ಭೀತಿಯನ್ನು ಇದು ತಗ್ಗಿಸುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ.

ಡಿಸೆಂಬರ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ, ಖಂಡಾಂತರ ಕ್ಷಿಪಣಿ ಪರೀಕ್ಷೆಯ ಮುನ್ಸೂಚನೆ ಹಾಗೂ ಅಣ್ವಸ್ತ್ರ ಅವಘಡಕ್ಕೆ ಸಂಬಂಧಿಸಿದ ಎರಡು ಪ್ರಮುಖ ಒಪ್ಪಂದಗಳ ಅವಧಿ ವಿಸ್ತರಿಸಲು ಸಮ್ಮತಿಸಿದ್ದವು.

ಉಭಯ ದೇಶಗಳಲ್ಲೂ ಇರುವ ಪರಮಾಣು ಸೌಲಭ್ಯ ಹಾಗೂ ಖಂಡಾಂತರ ಕ್ಷಿಪಣಿಗಳ ಕುರಿತು ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಮುದ್ರದೊಳಗೆ ಎರಡೂ ದೇಶಗಳ ಸೇನಾ ನೌಕೆಗಳಿಗೆ ಹಾನಿಯಾಗುವಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಮತ್ತೊಂದು ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪವನ್ನೂ ಆ ಸಭೆಯಲ್ಲಿ ಇಡಲಾಗಿತ್ತು.

2008ರ ಮುಂಬೈ ದಾಳಿ ನಂತರ ಎರಡು ವರ್ಷಗಳ ಕಾಲ ನಿಂತುಹೋಗಿದ್ದ ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ಕಳೆದ ವರ್ಷ ಮತ್ತೆ ಆರಂಭಗೊಂಡಿದ್ದು, ಶಾಂತಿ ಪ್ರಕ್ರಿಯೆಯ ಭಾಗವಾಗಿ ಈ ಕರಾರು  ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT