ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ ತಪಾಸಣೆಗೆ ಸಹಕಾರ: ಅಮೆರಿಕ ಮನವಿ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಣ್ವಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಇರಾನ್‌ಗೆ ತಪಾಸಣೆಗಾಗಿ ಆಗಮಿಸುವ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ತಂಡಕ್ಕೆ ಸಹಕಾರ ನೀಡುವಂತೆ ಅಮೆರಿಕ ಆ ರಾಷ್ಟ್ರವನ್ನು ಕೋರಿದೆ.

`ಐಎಇಎ ತಂಡವು ಇರಾನ್‌ಗೆ ಒಂದು ರಚನಾತ್ಮಕ ಸ್ಫೂರ್ತಿಯಿಂದ ಈ ಪ್ರವಾಸ ಕೈಗೊಂಡಿದೆ. ಇಂತಹ ಸ್ಪಂದನೆಯನ್ನೇ  ಈ ತಂಡವು ಆ ದೇಶದಿಂದ ಬಯಸುತ್ತಿದೆ. ಆದ್ದರಿಂದ ಇರಾನ್ ಈ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂಬುದು ನಮ್ಮ ವಿನಂತಿ~ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ವಿಕ್ಟೋರಿಯಾ ನ್ಯೂಲೆಂಡ್ ಹೇಳಿದ್ದಾರೆ.

ತೈಲ ವ್ಯಾಪಾರಕ್ಕೆ ನಿಷೇಧ ಹೇರಿದರೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಬೆದರಿಕೆ ಹಾಕಿದ್ದರ ನಡುವೆಯೂ ಐಎಇಎ ತಂಡ ಅಣ್ವಸ್ತ್ರಗಳ ಬಗ್ಗೆ ತಪಾಸಣೆ ನಡೆಸಲು ಇರಾನ್‌ಗೆ ಹೊರಟಿದೆ.
ಒಬಾಮ ಸ್ವಾಗತ: ಇರಾನ್ ಮೇಲೆ ತೈಲ ವ್ಯಾಪಾರ ನಿಷೇಧ ಹೇರಿರುವ ಐರೋಪ್ಯ ರಾಷ್ಟ್ರ ಒಕ್ಕೂಟದ  ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಸ್ವಾಗತಿಸಿದ್ದಾರೆ.

`ಇರಾನ್ ಕೈಗೊಂಡಿರುವ ಅಣ್ವಸ್ತ್ರ ಕಾರ್ಯಕ್ರಮಗಳು ತೀರಾ ಅಪಾಯಕಾರಿ. ಇಂತಹ ಆತಂಕವನ್ನು ಮೆಟ್ಟಿನಿಲ್ಲಲು ರಾಷ್ಟ್ರದ ಮೇಲೆ ವಿಧಿಸಿರುವ ಈ ನಿರ್ಬಂಧಗಳು ಅಂತರರಾಷ್ಟ್ರೀಯ ಸಮುದಾಯದಲ್ಲಿ ಇರುವ ಒಗ್ಗಟ್ಟಿನ ಸಾರಿ ಹೇಳುತ್ತವೆ~ ಎಂದು ಅವರು ಹೇಳಿದ್ದಾರೆ.

`ತೈಲ ಖರೀದಿ ಇಳಿಮುಖ~: ಕಳೆದ 2 ವರ್ಷಗಳಿಂದ ಭಾರತವು ಇರಾನ್‌ನಿಂದ ಖರೀದಿಸುತ್ತಿರುವ ತೈಲ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಈಗ ಅಮೆರಿಕ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಸಮುದಾಯುವು ಆ ರಾಷ್ಟ್ರದ ಬ್ಯಾಂಕ್ ವಹಿವಾಟಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದರಿಂದ ತೈಲ ಖರೀದಿ ಮತ್ತಷ್ಟು ಇಳಿಮುಖವಾಗಲಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ನಿರುಪಮ ರಾವ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT