ವಾಷಿಂಗ್ಟನ್ (ಪಿಟಿಐ): ಅಮೆರಿಕದ ಖಗೋಳ ವಿಜ್ಞಾನಿಗಳು ಅತಿ ದೂರದಲ್ಲಿರುವ ಎರಡು ಸೂಪರ್‌ನೋವಾಗಳನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಭೂಮಿಯಿಂದ 1000 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಈ ಸೂಪರ್‌ನೋವಾಗಳು ಗೋಚರಿಸಿವೆ. ಇವು ಸಾಧಾರಣ ಸೂಪರ್‌ನೋವಾಗಳಿಗಿಂತ ನೂರು ಪಟ್ಟು ಪ್ರಕಾಶಮಾನವಾಗಿವೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.