ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಕ್ರಮಣ ತೆರವು: ಎರಡನೇ ಹಂತಕ್ಕೆ ಸಿದ್ಧತೆ

Last Updated 8 ಜೂನ್ 2011, 8:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಾಕಿ ಉಳಿದ ನಾಲ್ಕು ಕಟ್ಟಡಗಳ ಪಾರ್ಕಿಂಗ್ ಜಾಗದ ಅತಿ ಕ್ರಮಣವನ್ನು ಕಟ್ಟಡಗಳ ಮಾಲೀಕರೇ ಸ್ವಯಂ ಪ್ರೇರಣೆಯಿಂದ ಮಂಗಳವಾರ ತೆರವುಗೊಳಿಸಿದ್ದರಿಂದ ಮೊದಲ ಪಟ್ಟಿ ಯಲ್ಲಿದ್ದ ಎಲ್ಲ 45 ಕಟ್ಟಡಗಳ ಪಾರ್ಕಿಂಗ್ ಜಾಗ ಮುಕ್ತವಾಗಿದೆ. ಹೀಗಾಗಿ ಪಾಲಿಕೆಯ ಜೆಸಿಬಿಗಳಿಗೆ ಮೊದಲ ಹಂತದಲ್ಲಿ ಕೆಲಸವೇ ಇಲ್ಲ ದಂತಾಗಿದೆ.

ಪಾಲಿಕೆ ಮೊದಲ ಪಟ್ಟಿಯಲ್ಲಿ ಗುರುತಿಸಿದ್ದ 45 ಕಟ್ಟಡಗಳ ಪೈಕಿ ಐದು ಕಟ್ಟಡಗಳ ಅತಿಕ್ರಮಣವನ್ನು ಅಧಿಕಾರಿ ಗಳೇ ಮುಂದೆ ನಿಂತು ತೆರವು ಗೊಳಿಸಿದ್ದರು. ಮಿಕ್ಕ ಕಟ್ಟಡಗಳ ಪಾರ್ಕಿಂಗ್ ಜಾಗವನ್ನು ಮುಕ್ತ ಗೊಳಿಸುವಂತೆ ನೋಟಿಸ್ ಜಾರಿಗೊಳಿಸ ಲಾಗಿತ್ತು. ಅಂತಿಮ ಗಡುವು ಮುಗಿ ಯುವಹೊತ್ತಿಗೆ ಬಹುತೇಕ ಕಟ್ಟಡಗಳ ಅತಿಕ್ರಮಣವನ್ನು ಕಟ್ಟಡಗಳ ಮಾಲೀಕರೇ ತೆರವುಗೊಳಿಸಿದ್ದರು.

ಗಡುವು ಮುಗಿದರೂ ನಾಲ್ಕು ಕಟ್ಟಡಗಳ ಪಾರ್ಕಿಂಗ್ ಜಾಗ ತೆರವು ಗೊಂಡಿರಲಿಲ್ಲ. ಸೋಮವಾರ ರಾತ್ರಿ ಸಭೆ ಸೇರಿದ್ದ ಪಾಲಿಕೆ ಅಧಿಕಾರಿಗಳು ಇನ್ನೊಂದು ದಿನ ಕಾಲಾವಕಾಶ ನೀಡಲು ನಿರ್ಧರಿಸಿದ್ದರು. ಆ ನಾಲ್ಕೂ ಕಟ್ಟಡಗಳ ಮಾಲೀಕರು ಪಾರ್ಕಿಂಗ್ ಜಾಗ ಮುಕ್ತ ಗೊಳಿಸುವ ಕೆಲಸವನ್ನು ಮಂಗಳ ವಾರವೇ ಆರಂಭಿಸಿದ್ದಾರೆ.

`ಪಾಲಿಕೆ ಜೆಸಿಬಿಗಳು ಹಸ್ತಚಾಚಲು ಬಿಟ್ಟರೆ ಕಾನೂನು ಕ್ರಮ ಎದುರಿಸ ಬೇಕಾಗುವ ಜೊತೆಗೆ ಕಟ್ಟಡವೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಲಿದೆ. ಅಲ್ಲದೆ, ಕಾರ್ಯಾಚರಣೆ ವೆಚ್ಚವನ್ನೂ ಭರಿಸಬೇಕಾಗುತ್ತದೆ~ ಎಂಬ ಭೀತಿಯ ಕಟ್ಟಡಗಳ ಮಾಲೀಕರ ಈ ಕ್ರಮಕ್ಕೆ ಕಾರಣ ಎಂದು ವಿಶ್ಲೇಷಣೆ ಮಾಡ ಲಾಗುತ್ತಿದೆ.

ಮಂಗಳವಾರ ಸಂಜೆ ಎಲ್ಲ ಕಟ್ಟಡಗಳನ್ನು ಪರಿಶೀಲಿಸಿ ಬಂದ ವಲಯಾಧಿಕಾರಿಗಳು ಆಯುಕ್ತರಿಗೆ ವರದಿ ಒಪ್ಪಿಸಿದರು. ಬೆವರು ಹರಿಸದೆ ಮೊದಲ ಹಂತದ ಕಾರ್ಯಾಚರಣೆ ಮುಗಿಸಿದ ಸಂತಸ ಎಲ್ಲ ಅಧಿಕಾರಿಗಳ ಮೊಗದಲ್ಲಿ ಲಾಸ್ಯವಾಡುತ್ತಿತ್ತು.

`ಮೊದಲ ಹಂತದಲ್ಲಿ ನಾಲ್ಕು ಕಟ್ಟಡಗಳ ಅತಿಕ್ರಮಣ ಮಾತ್ರ ಗಡುವು ಮುಗಿದ ಮೇಲೂ ಬಾಕಿ ಉಳಿದಿತ್ತು. ಆದ್ದರಿಂದ ಮತ್ತೊಂದು ದಿನ ಕಾಯಲು ನಿರ್ಧರಿಸಿದ್ದೆವು. ನಮ್ಮ ನಿರೀಕ್ಷೆಯಂತೆ ಮಂಗಳವಾರ ಬೆಳಿಗ್ಗೆ ಎರಡು ಕಟ್ಟಡಗಳ ಅತಿಕ್ರಮಣ ತೆರವು ಆರಂಭವಾಯಿತು. ಸಂಜೆವೇಳೆಗೆ ಇನ್ನೆರಡು ಕಟ್ಟಡಗಳಲ್ಲೂ ಇದೇ ಚಟುವಟಿಕೆ ಕಂಡುಬಂತು. ಹೀಗಾಗಿ ಕಾರ್ಯಾಚರಣೆ ನಡೆಸುವ ಪ್ರಸಂಗ ಎದುರಾಗಲಿಲ್ಲ~ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

`ಎರಡನೇ ಹಂತದಲ್ಲಿ ಈಗಾಗಲೇ ಹತ್ತು ಕಟ್ಟಡಗಳ ಮಾಲೀಕರಿಗೆ ಅತಿಕ್ರಮಣ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಗೆ ನೀಡಲಾಗಿರುವ ಗುಡುವು ಇನ್ನೂ ಹತ್ತು ದಿನಗಳಲ್ಲಿ ಕೊನೆಗೊಳ್ಳಲಿದ್ದು, ಅಷ್ಟರಲ್ಲಿ ಸ್ಪಂದನೆ ಸಿಗದಿದ್ದರೆ ಕಾರ್ಯಾಚರಣೆ ಶುರು ಮಾಡಲಾಗುವುದು~ ಎಂದು ಅವರು ಮಾಹಿತಿ ನೀಡಿದರು.

`ಹೊಸದಾಗಿ 20 ಕಟ್ಟಡಗಳನ್ನು ಗುರುತಿಸಲಾಗಿದ್ದು, ಬುಧವಾರವೇ ಆ ಕಟ್ಟಡಗಳ ಮಾಲೀಕರಿಗೆ ಮೊದಲ ನೋಟಿಸ್ ಜಾರಿ ಮಾಡಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT