ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿಗಳ ನಿರೀಕ್ಷೆಯಲ್ಲಿ ಬನ್ನೇರುಘಟ್ಟ

Last Updated 13 ಡಿಸೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವು ಹೊಸ ಅತಿಥಿಗಳ ನಿರೀಕ್ಷೆ ಯಲ್ಲಿದೆ.

ದಕ್ಷಿಣ ಆಫ್ರಿಕಾದಿಂದ ನಾಲ್ಕು ಜೀಬ್ರಾ, ಜೋಡಿ ಜಿರಾಫೆ ಬರಲಿವೆ. ದತ್ತು ಪಡೆದು ಪೋಷಣೆ ಮಾಡು­ವವರು ಸಿಕ್ಕರೆ  ಜೋಡಿ ಚಿಂಪಾಂಜಿ ಸಹ ಜೈವಿಕ ಉದ್ಯಾನಕ್ಕೆ ಇನ್ನೊಂದು ತಿಂಗಳಿನಲ್ಲಿ ಬರಲಿವೆ.

ಈ ಕುರಿತು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇ­ಶಕ ರಂಗೇಗೌಡ, ‘ಪ್ರಾಣಿಗಳು ಇಲ್ಲಿಯ ವಾತಾವರಣ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಇದರಿಂದ,   ಇಲ್ಲಿಗೆ ಬಂದ ಒಂದು ತಿಂಗಳ ನಂತರ ಅವು­ಗಳನ್ನು ಪ್ರದರ್ಶನ ಮಾಡಲಾಗುವುದು’ ಎಂದರು.
‘ಜೀಬ್ರಾ, ಜಿರಾಫೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. ಆದರೆ, ಚಿಂಪಾಂಜಿಗಳನ್ನು ಇದುವರೆಗೂ ದತ್ತು ಪಡೆಯಲು ಯಾರೂ ಬಂದಿಲ್ಲ’ ಎಂದು ಹೇಳಿದರು.

‘ಗದಗ ಜಿಲ್ಲೆಯಿಂದ ಐದು ನೀಲಗಾಯಿ ಮತ್ತು ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಎರಡು ಸೀಳು ನಾಯಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ನೀಲಿ ಬಣ್ಣದ ಪಾರಿವಾಳಗಳು ಜೈವಿಕ ಉದ್ಯಾನದ ಆಕರ್ಷಣೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT